ಶಾಲಾ ಪುನರಾರಂಭ ದಿನ ಆಸುಪಾಸಿನ ಸಿಗರೇಟ್ ಅಂಗಡಿಗಳ ಮೇಲೆ ದಾಳಿ
ಸೋಮವಾರ, 25 ಅಕ್ಟೋಬರ್ 2021 (20:54 IST)
ಬೆಂಗಳೂರು: ಶಾಲಾ ಆವರಣದ 100 ಮೀಟರ್ ಆಸು ಪಾಸಿನಲ್ಲಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರದ ಪಶ್ಚಿಮ ವಿಭಾಗದ ಪೊಲೀಸರು 17 ಎಫ್ಐಆರ್ ದಾಖಲಿಸಿಕೊಂಡು 52,750 ರೂ ದಂಡ ವಸೂಲಿ ಮಾಡಿದರು.
ಶಾಲೆ ಪುನರಾರಂಭ ದಿನವಾದ ಸೋಮವಾರ ಪಶ್ಚಿಮ ವಿವಿಭಾಗದಲ್ಲಿರುವ ಶಾಲೆಗಳ ಸಮೀಪದ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಆ ವೇಳೆ ಸಿಗರೇಟ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಚಾಮರಾಜಪೇಟೆಯ 10, ಉಪ್ಪಾರ್‌ಪೇಟೆ 35, ಕಲಾಸಿಪಾಳ್ಯ 15, ಆರ್.ಆರ್‌ನಗರ 59, ಕೆಂಗೇರಿ 25, ಜ್ಞಾನಭಾರತಿ ಠಾಣಾ ವ್ಯಾಪ್ತಿಯ 20 ಸೇರಿ ಒಟ್ಟು 304 ಪ್ರಕರಣ ದಾಖಲಿಸಿ ಸ್ಥಳದಲ್ಲೇ ದಂಡ ವಿಧಿಸಿದರು.