ಆನೆಕಾಲು ಮಾತ್ರೆ ಸೇವಿಸಿ ಶಾಲಾ‌ ವಿದ್ಯಾರ್ಥಿಗಳು ಅಸ್ವಸ್ಥ

ಗುರುವಾರ, 27 ಸೆಪ್ಟಂಬರ್ 2018 (13:59 IST)
ಆನೆಕಾಲು ರೋಗ‌ ನಿರೋಧಕ ಮಾತ್ರೆ ಸೇವಿಸಿ ಎಂಟಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಈ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮಧ್ಯಾಹ್ನದ ಬಿಸಿ ಊಟದ ನಂತರ ಮಕ್ಕಳಿಗೆ ಆನೆಕಾಲ ರೋಗದ ನಿರೋಧಕ ಮಾತ್ರೆಗಳು ನೀಡಲಾಗಿತ್ತು.

ಶಾಲೆ‌ ಮುಗಿಸಿಕೊಂಡು ಮನೆಗೆ ತೆರಳಿದಾಗ ಮಕ್ಕಳಿಗೆ ತಲೆ ಸುತ್ತು, ಆಯಾಸ ಪಡುತ್ತಿರುವುದನ್ನು ಪೋಷಕರು ಗಮನಿಸಿದ್ದಾರೆ. ಕೂಡಲೇ ಶಾಲಾ ಮಕ್ಕಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಒಟ್ಟು ಎಂಟು ಮಕ್ಕಳು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ