ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಫಿ ಮಾಡುವುದನ್ನು ತಡೆಯಲು ರಾಜಸ್ತಾನ ಸರ್ಕಾರ ಮಾಡಿದ್ದೇನು ಗೊತ್ತಾ?

ಭಾನುವಾರ, 5 ಆಗಸ್ಟ್ 2018 (14:39 IST)
ಜೈಪುರ : ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಫಿ ಮಾಡುವುದನ್ನು ತಡೆಯಲು ರಾಜಸ್ತಾನ ಸರ್ಕಾರ ಹೊಸ ಕ್ರಮವೊಂದನ್ನು ಕೈಗೊಂಡಿದೆ.


ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಚೀಟಿ ಇಟ್ಟುಕೊಂಡು ರೀಕ್ಷೆಯಲ್ಲಿ ಕಾಫಿ ಮಾಡುತ್ತಿದ್ದರು. ಆದರೆ ಇತ್ತಿಚಿಗನ ದಿನಗಳಲ್ಲಿ ವಿದ್ಯಾರ್ಥಿಗಳು ಕಾಫಿ ಮಾಡಲು ಇಂಟರ್ ನೆಟ್ ನ್ನು ಸಹ ಸ್ಮಾರ್ಟ್ ಆಗಿ ಬಳಕೆ ಮಾಡುತ್ತಾರೆ. ಆದಕಾರಣ ಇದನ್ನು ತಡೆಯಲು ರಾಜಸ್ತಾನ್ ಸರ್ಕಾರ ನಾಗರಿಕ ಸೇವಾ ಆಯೋಗದ ಪರೀಕ್ಷೆಯಂದು ಇಂಟರ್​ನೆಟ್​ ಸೇವೆಗೆ ನಿಷೇಧ ಹೇರಿದೆ.


ಈ ಪರೀಕ್ಷೆ10 ಗಂಟೆಗೆ ಆರಂಭಗೊಳ್ಳಲಿದ್ದು, 9:30ರಿಂದ 1 ಗಂಟೆಯವರೆಗೆ ಅಲ್ವಾರ್​, ಜೈಪುರ್​, ಸಿಕಾರ್​, ಝುಂಝುನು ಹಾಗೂ ದವುಸಾ ನಗರಗಳಲ್ಲಿ ಇಂಟರ್​ನೆಟ್​ ಸೇವೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. 2ಜಿ/3ಜಿ/4ಜಿ ಡಾಟಾ ಇಂಟರ್​ನೆಟ್​ ಸೇವೆ, ಎಸ್​ಎಂಎಸ್​, ಎಂಎಂಎಸ್​, ವಾಟ್ಸ್​ಆಪ್​, ಫೇಸ್ಬುಕ್​, ಟ್ವಿಟ್ಟರ್​ ಹಾಗೂ ಇತರೆ ಆನ್​ಲೈನ್​ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ