ಎಲೆಕ್ಷನ್ ಹೊತ್ತಲ್ಲೇ ಶುರುವಾಯ್ತು ಡ್ರಗ್ಸ್ ಹಾವಳಿ..!

ಗುರುವಾರ, 16 ಮಾರ್ಚ್ 2023 (18:52 IST)
ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಎಲೆಕ್ಷನ್ ಬರ್ತಾಯಿದೆ. ಅದರ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾರಾಟ ಕೂಡ ಎಗ್ಗಿಲ್ಲಿದೇ ನಡೆಯುತ್ತಿದೆ, ಕಳೆದ ತಿಂಗಳಿನಿಂದ ಹಲವಾರು ಕಡೇ ಸಿಸಿಬಿ ರೇಡ್ ಮಾಡಿ ಬಲೆಗೆ ಹಾಕಿಕೊಂಡಿತ್ತು, ಇನ್ನೇನು ಕೆಲದಿನಗಳಲ್ಲೇ‌ ಕರ್ನಾಟಕ ವಿಧಾನಸಭಾ ಚುನಾವಣೆ ಬರ್ತಾಯಿದ್ದು,, ಈ ಹೊತ್ತಲ್ಲೇ ಸಿಲಿಕಾನ್ ಸಿಟಿಯಲ್ಕಿ ಡ್ರಗ್ಸ್ ಮಾರಾಟಗಾರರ ಹಾವಳಿ‌ ಕೂಡ ಹೆಚ್ಚಾಗ್ತಾಯಿದೆ, ಕಳೆದ ಫೆಬ್ರುವರಿ ತಿಂಗಳಲ್ಲಿ ಒಟ್ಟು ಒಂಭತ್ತು ಪ್ರಕರಣಗಳನ್ನ ಭೇದಿಸಿದ ಸಿಸಿಬಿ ಪೊಲೀಸ್ರು, ಸುಮಾರು ಎರಡು ಕೋಟಿ 48 ಲಕ್ಷ ರೂ‌ಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಹೆಣ್ಣೂರು, ಕೊಡೀಗೆಹಳ್ಳಿ, ಹೆಚ್ ಎಸ್ ಆರ್ ಲೇಔಟ್, ಪುಟ್ಟೇನಹಳ್ಳಿ, ತಲಘಟ್ಟಪುರ, ಕೋರಮಂಗಲ, ಬೊಮ್ಮನಹಳ್ಳಿ , ಕೆ.ಆರ್,ಪುರಂ, ಬಾಣಸವಾಡಿ, ವ್ಯಾಪ್ತಿಯಲ್ಲಿರುವ ಡ್ರಗ್ಸ್ ಧಂದೆಕೋರರನ್ನ ಹೆಡೆಮುರಿಕಟ್ಟಿರೋ ಸಿಸಿಬಿ ತಂಡ ವಿದೇಶಿ‌ ಪ್ರಜೆಗಳು ಸೇರಿ‌ ಒಟ್ಟು 13 ಜನರನ್ನ ಬಂಧಿಸಿದ್ದಾರೆ.

ವಿದೇಶಿ‌ಪ್ರಜೆಗಳ ಜೊತೆ ಸೇರಿ ಪ್ರತಿಷ್ಠಿತ ಕಾಲೇಜುಗಳ‌ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ದಂಧೆ ಮಾಡುತ್ತಿದ್ರು, ಇನ್ನೂ ಕೇರಳ, ಆಂದ್ರಪ್ರದೇಶದ ಆರೋಪಿಗಳು ಇದರಲ್ಲಿ‌ದ್ದು, ನಮ್ಮ ರಾಜ್ಯದ‌ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.ಇದ್ರ ಮಧ್ಯ ಆರೋಪಿಯೊಬ್ಬ ತನ್ನ ಕಾರನ್ನು ತನಗೆ ಬೇಕಾದ ರೀತಿಯಲ್ಲಿ ಆಲ್ಟರ್ ಮಾಡಿಸಿಕೊಂಡಿದ್ದ, ಅದೇ ರೀತಿ ಡ್ರಗ್ಸ್ ನ್ನ ಸಪ್ಲೇ ಮಾಡ್ತಾಯಿದ್ದ, ಈದೆಲ್ಲದೆ ಜಾಡನ್ನ ಹಿಡಿದ ಸಿಸಿಬಿ ತಂಡ ಆರೋಪಿಗಳನ್ನ ಜೈಲಿಗಟ್ಟಿದ್ದಾರೆ. ಇನ್ನೂ ಬಂಧಿತರಿಂದ ಒಂದೂವರೆ ಕೆ.ಜಿ. ಎಂಡಿಎಂ ಕ್ರಿಸ್ಟೆಲ್, 41 ಎಕ್ಸ್ ಟಸಿ ಫಿಲ್ಸ್, 25 ಕೆ.ಜಿ.ಗಾಂಜಾ, ಎರಡು ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಪೋನ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಒಟ್ಟಾರೆ ಯಾಗಿ ಚುನಾವಣೆ ಕಾವು ಹೆಚ್ಚಾಗಿದ್ದು, ಸಿಸಿಬಿ ಪೊಲೀಸ್ರು ಇನ್ನಷ್ಟು ಎಚೆತ್ತುಕೊಳ್ಳಬೇಕಾಗಿದೆ, ಡ್ರಗ್ಸ್ ಮಾರಾಟ ಮಾಡಿ‌ ಸಮಾಜ ಸ್ವಾಸ್ಥ್ಯ ವನ್ನ ಹಾಳು ಮಾಡುವವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇನ್ನೂ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ