ಮಹಾಶಿವರಾತ್ರಿಯ ಪ್ರಯುಕ್ತ ತೊಗರಿಯಲ್ಲಿ ಅರಳಿದ ಶಿವಲಿಂಗ

ಶುಕ್ರವಾರ, 21 ಫೆಬ್ರವರಿ 2020 (11:13 IST)
ಕಲಬುರಗಿ : ಇಂದು ಮಹಾಶಿವರಾತ್ರಿಯ ಪ್ರಯುಕ್ತ ಕಲಬುರಗಿಯಲ್ಲಿ ಅಲ್ಲಿನ ಪ್ರಮುಖ ಬೆಳೆಯಾದ  ತೊಗರಿಯಲ್ಲಿ ಶಿವಲಿಂಗವನ್ನು ಶೃಂಗರಿಸಿ ಪ್ರತಿಷ್ಠಾಪಿಸಲಾಗಿದೆ.

 ಒಟ್ಟು 25 ಅಡಿ ಎತ್ತರದಲ್ಲಿ ಶಿವಲಿಂಗವನ್ನು ನಿರ್ಮಿಸಲಾಗಿದ್ದು, ಇದಕ್ಕೆ 3 ಕ್ವಿಂಟಾಲ್ ತೊಗರಿಯನ್ನು ಬಳಸಲಾಗಿದೆ ಎನ್ನಲಾಗಿದೆ. ಈ ಶಿವನ ದರ್ಶನ ಪಡೆದು  ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ತಂಡೋಪ ತಂಡವಾಗಿ ಬರುತ್ತಿದ್ದಾರೆ.

 

ಕಲಬುರಗಿಯಲ್ಲಿ ಹೆಚ್ಚಾಗಿ ತೊಗರಿ ಬೆಳೆ ಬೆಳೆಯಲಾಗುತ್ತಿದ್ದು, ಇದೀಗ ಮಹಾಶಿವರಾತ್ರಿಯ ಈ ಶುಭದಿನದಂದು ತೊಗರಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವನ ಕೃಪೆಗೆ ಮಾತ್ರವಲ್ಲ ಶಿವ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ