ಮಾಜಿ ಪಿಎಂ ಕ್ಷೇತ್ರದಲ್ಲಿ ಅನಿಷ್ಟ ಪದ್ಧತಿ ಜೀವಂತ!

ಮಂಗಳವಾರ, 5 ಫೆಬ್ರವರಿ 2019 (17:03 IST)
ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆಯಲ್ಲಿಯೇ ಅನಿಷ್ಟ ಪದ್ದತಿ ಈಗಲೂ ನೆಲೆಯೂರಿದೆ.

ಸಕಲೇಶಪುರ ತಾಲ್ಲೂಕಿನಲ್ಲಿ ಸುಮಾರು 24 ಜೀತಗಾರರನ್ನು ರಕ್ಷಣೆ ಮಾಡಲಾಗಿದೆ. ಇಟ್ಟಿಗೆಗೂಡಿನ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ  ಮಾಲೀಕನಿಂದ ಗೃಹಬಂಧನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಸಕಲೇಶಪುರ ತಾಲ್ಲೂಕಿನ ಮಲಗಳ್ಳಿ ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳಂತೆ ದುಡಿಯುತ್ತಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

ತಮಿಳುನಾಡಿನ ಕೃಷ್ಣ ಗಿರಿ ಮೂಲದ ಕಾರ್ಮಿಕರು ರಕ್ಷಣೆಗೆ ಒಳಗಾಗಿದ್ದಾರೆ. ಜೀತ ಕಾರ್ಮಿಕರ ಪೈಕಿ ಐವರು ಮಹಿಳೆಯರು, ನಾಲ್ವರು ಮಕ್ಕಳು ಇದ್ದರು. ಕಡಿಮೆ‌ ಕೂಲಿ ಹಣ ನೀಡಿ ಹೆಚ್ಚು ‌ಕೆಲಸ ‌ಮಾಡಿಸಿಕೊಳ್ಳುತ್ತಿದ್ದನಂತೆ ಇಟ್ಟಿಗೆ ‌ಗೂಡಿನ ಮಾಲೀಕ. ಇನ್ನು ಮಧ್ಯವರ್ತಿಗಳು ಉತ್ತಮ ವೇತನ, ಮನೆ ಸೌಲಭ್ಯ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ಕಾರ್ಮಿಕರನ್ನು ಕರೆ ತಂದಿದ್ದರು ಎನ್ನಲಾಗಿದೆ.

ಕಳೆದೆರಡು ತಿಂಗಳಿಂದ 50 ಜೀತದಾಳುಗಳು ರಕ್ಷಣೆಗೊಂಡಿದ್ದು, ಈಗ ಮತ್ತೆ ಪ್ರಕರಣ ಮರುಕಳಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ