ತಂದೆಯನ್ನ ಕೊಂದು 15 ದಿನಗಳ ಬಳಿಕ ಪೊಲೀಸರಿಗೆ ಶರಣಾದ ಮಗ!

ಬುಧವಾರ, 19 ಜುಲೈ 2023 (14:30 IST)
ರಾಯಚೂರು : ಹೆತ್ತ ತಂದೆಯನ್ನ ಕೊಂದು 15 ದಿನಗಳ ಬಳಿಕ ಆರೋಪಿ ಮಗ ಪೊಲೀಸರಿಗೆ ಶರಣಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಈರಣ್ಣ ಪೊಲೀಸರಿಗೆ ಶರಣಾಗಿರುವ ಕೊಲೆ ಆರೋಪಿ. 70 ವರ್ಷದ ಶಿವನಪ್ಪ ಮಗನಿಂದ ಹತನಾಗಿರುವ ನತದೃಷ್ಟ ತಂದೆ.

ಭಾರತ್ ಮಾಲಾ ಹೈವೇ ಭೂ ಸ್ವಾಧೀನ ಪರಿಹಾರದ ಹಣದ ವಿಚಾರ ಹಾಗೂ ಮದ್ಯಪಾನ ಮಾಡಿ ತಾಯಿ ಜೊತೆ ಜಗಳವಾಡುತ್ತಾನೆ ಎಂದು ಆರೋಪಿ ತಂದೆಯ ಜೊತೆ ಜಗಳ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ತಾಯಿಯ ಎದುರಲ್ಲೇ ತಂದೆಯನ್ನು ಕೊಲೆ ಮಾಡಿ ಮಣ್ಣಿನಲ್ಲಿ ಹೂತಿಟ್ಟಿದ್ದಾನೆ. 

ತಂದೆಯ ಶವವನ್ನು ತಾನೇ ಹೂತಿಟ್ಟು ತಂದೆ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಳಿಕ ಗ್ರಾಮಸ್ಥರು ಹಾಗೂ ಸಂಬಂಧಿಕರು ಅನುಮಾನಗೊಂಡು ಮಗನ ವಿಚಾರಣೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ