ಐಸಿಯುವಿನಲ್ಲಿದ್ದ ನವಜಾತ ಶಿಶುಗಳಿಗೆ ಇಲಿ ಕಚ್ಚಿ ಸಾವು ಆರೋಪ: ಕ್ರಮಕ್ಕೆ ಧರಣಿ

Sampriya

ಸೋಮವಾರ, 22 ಸೆಪ್ಟಂಬರ್ 2025 (16:33 IST)
Photo Credit X
ಇಂದೋರ್: ಇಲಿ ಕಚ್ಚಿ ಇಬ್ಬರು ನವಜಾತ ಹೆಣ್ಣು ಮಕ್ಕಳು ಸಾವನ್ನಪ್ಪಿರುವ ಕುರಿತು ಉನ್ನತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಡಕಟ್ಟು ಸಂಘಟನೆಯೊಂದು ಇಲ್ಲಿನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.

ಜೈ ಆದಿವಾಸಿ ಯುವ ಶಕ್ತಿ ಸದಸ್ಯರು ಭಾನುವಾರ ತಮ್ಮ ಪ್ರತಿಭಟನೆ ಆರಂಭಿಸಿ ಎಂವೈಎಚ್‌ನ ಮುಖ್ಯ ದ್ವಾರದಲ್ಲಿ ಧರಣಿ ಕುಳಿತರು.

ಕಾಲೇಜು ಡೀನ್ ಡಾ.ಅರವಿಂದ್ ಘಂಘೋರಿಯಾ ಮತ್ತು ಎಂವೈಎಚ್ ಅಧೀಕ್ಷಕ ಡಾ.ಅಶೋಕ್ ಯಾದವ್ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 

ಡೀನ್ ಹಾಗೂ ಆಸ್ಪತ್ರೆ ಅಧೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಇಲಿ ಕಚ್ಚಿ ಸಾವನ್ನಪ್ಪಿದ ಎರಡು ನವಜಾತ ಶಿಶುಗಳ ಕುಟುಂಬಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ಬುಡಕಟ್ಟು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಲೋಕೇಶ್ ಮುಜಲ್ದಾ ಹೇಳಿದರು.

MYH ನ ತೀವ್ರ ನಿಗಾ ಘಟಕದಲ್ಲಿ (ICU) ನವಜಾತ ಶಿಶುವಿನ ಬೆರಳು ಹಾಗೂ ತಲೆ ಮತ್ತು ಭುಜದ ಮೇಲೆ ಇಲಿ ಕಚ್ಚಿದೆ. ಈ ಘಟನೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರ ಮಧ್ಯರಾತ್ರಿಯಲ್ಲಿ ನಡೆದಿದೆ. ನಂತರ ಶಿಶುಗಳು ಸಾವನ್ನಪ್ಪಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ