ಯುವಕನ ಜತೆ ಲಾಡ್ಜ್ ಗೆ ಬಂದ ಗೃಹಿಣಿ ಕಥೆ ಫಿನಿಷ್

ಸೋಮವಾರ, 9 ಸೆಪ್ಟಂಬರ್ 2019 (16:24 IST)
ಯುವಕನೊಂದಿಗೆ ಲಾಡ್ಜ್ ಗೆ ಬಂದಿದ್ದ ಮಹಿಳೆಗೆ ಆಗಬಾರದದ್ದು ಆಗಿ ಹೋಗಿದೆ.

ಖಾಸಗಿ ಲಾಡ್ಜ್ ನಲ್ಲಿ ನಡೆದ ದಾರುಣ ಘಟನೆಯಲ್ಲಿ ಇಬ್ಬರು ಮಕ್ಕಳೆದುರು ಮಹಿಳೆಯನ್ನು ಕೊಂದು ಯುವಕನೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಚಿಕ್ಕೂರು ಗ್ರಾಮದ ಸುಮಂಗಳ (30) ಎಂಬ ಮಹಿಳೆ ಪವನ್ (25) ಎಂಬ ಯುವಕನೊಂದಿಗೆ ತನ್ನ ಇಬ್ಬರು ಮಕ್ಕಳಾದ ರಾಹುಲ್ (3) ಮತ್ತು ಸ್ಪಂದನ (2) ಅವರೊಂದಿಗೆ ಚಿತ್ರದುರ್ಗ  ನಗರದ ಖಾಸಗಿ ಲಾಡ್ಜ್ ನಲ್ಲಿ ಬೆಳಿಗ್ಗೆ ಬಂದು ತಂಗಿದ್ದಾರೆ.

ಸುಮಂಗಳ ಮತ್ತು ಪವನ್ ಪರಸ್ಪರ ಜಗಳವಾಡಿಕೊಂಡಿದ್ದು, ಆಕೆಯನ್ನು ಮನಬಂದಂತೆ ಥಳಿಸಿ ಕೊಲೆ ಮಾಡಿದ್ದಾನೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಷ್ಟೆಲ್ಲಾ ದಾರುಣ ನಡೆಯುತ್ತಿದ್ದರೆ ಏನೂ ಅರಿಯದ ಕಂದಮ್ಮಗಳು ಮಾತ್ರ ಸುಮ್ಮನೇ ಅಳುತ್ತಿದ್ದವು. ಸುಮಾರು ಸಮಯದ ನಂತರ ಮಕ್ಕಳು ಬಂದು ಲಾಡ್ಜ್ ನವರಿಗೆ ವಿಷಯ ತಿಳಿಸಿದ್ದಾರೆ. ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ