ನದಿ ದಂಡೆಗೆ ಹೋದವರ ಕಥೆ ಹೀಗಾಗೋದಾ?

ಸೋಮವಾರ, 21 ಸೆಪ್ಟಂಬರ್ 2020 (21:36 IST)
ನದಿ ದಡದಲ್ಲಿ ಮರಳು ಎತ್ತಲು ಎಂದು ಹೋದವರ ಕಥೆ ಆಗಬಾರದ್ದು ಆಗಿಹೋಗಿದೆ.

ಸತತ ಮಳೆಯಿಂದ ತುಂಗಾ ಹಾಗೂ ಭದ್ರಾ ಆಣೆಕಟ್ಟು ತುಂಬಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿ ಬಿಡುತ್ತಿರುವ ಕಾರಣ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ನದಿಯಲ್ಲಿ ಮರಳು ಎತ್ತಲು ಹೋಗಿದ್ದ ಇಬ್ಬರು ಯುವಕರು ಸೇರಿದಂತೆ ಎರಡು ಎತ್ತುಗಳು ನದಿ ಪಾಲಾದ ಘಟನೆ ನಡೆದಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲ್ಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಘಟನೆ ನಡೆದಿದೆ.

ಮೃತರನ್ನು ಆರೇಮಲ್ಲಾಪುರ ಗ್ರಾಮದ ಜಗದೀಶ ಅಣ್ಣೇರ(25) ಹಾಗೂ ಬೆಟ್ಟಪ್ಪ ಮಿಳ್ಳಿ(23) ಎಂದು ಗುರುತಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ