ತೂಗು ಸೇತುವೆ ಭಾರೀ ಪ್ರವಾಹಕ್ಕೆ ನೀರು ಪಾಲು

ಶನಿವಾರ, 10 ಆಗಸ್ಟ್ 2019 (17:32 IST)
ಪ್ರವಾಹದ ನೀರು ಹಾಗೂ ಮಳೆ ನೀರಿನ ರಭಸಕ್ಕೆ ತೂಗುಸೇತುವೆ ನೀರುಪಾಲಾಗಿದೆ.

ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಪ್ರಮಾಣ ಹೆಚ್ಚುತ್ತಿರುವಂತೆಯೇ ನದಿ ತೀರದ ಪ್ರದೇಶಗಳು ಮುಳುಗಡೆಗೊಳ್ಳುತ್ತಿವೆ. ನೀರಿನ ರಭಸಕ್ಕೆ ವಳಾಲು ತೂಗುಸೇತುವೆ ನೀರು ಪಾಲಾಗಿದೆ.

ತೂಗು ಸೇತುವೆಯ ಮೇಲೆ ನೀರು ಬಂದಿದ್ದು, ಮರಗಳು ಬಿದ್ದು ಹಾನಿ ಸಂಭವಿಸಿತ್ತು. ರಾತ್ರಿಯಾಗುತ್ತಿದ್ದಂತೆ ಸೇತುವೆಯ ಮಧ್ಯ ಭಾಗ ಮುರಿದು ಬಿದ್ದಿದ್ದು, ನೀರುಪಾಲಾಗಿದೆ. ನೇತ್ರಾವತಿ ನದಿ ಬಂಟ್ವಾಳ್ ದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಣಿಹಳ್ಳ  -ಬಂಟ್ವಾಳ್ ಮುಂತಾದ ಕಡೆಗಳಲ್ಲಿ ನದಿ ನೀರು ರಸ್ತೆ ಗೆ ಬಂದಿರುವ ಕಾರಣ ಬಂಟ್ವಾಳ್ ಧರ್ಮಸ್ಥಳ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.

ಉಪ್ಪಿನಂಗಡಿ -ಮಾಣಿ ರಸ್ತೆಯಲ್ಲೂ ವಾಹನ ಸಂಚಾರ ಬಂದ್ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ತೀವ್ರಗೊಂಡಿರುವುದರಿಂದ  ಶಾಸಕ ರಾಜೇಶ್ ನಾಯ್ಕ್  ಮದ್ಯೆ ರಾತ್ರಿಯಲ್ಲೂ  ಅಪಾಯಕ್ಕೆ  ಸಿಲುಕಿದ  ಜನರನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ  ತೊಡಗಿದ್ದರು. ಬಂಟ್ವಾಳ್ ತಾಲೂಕಿನ ವಿವಿಧೆಡೆ ನೂರಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ