ದೇಶದ ಬೊಕ್ಕಸ‌ ಸೇರ್ತಿದ್ದ ಪೊಲೀಸ್ರ ಟೆಲಿಫೋನ್ ಬಿಲ್

ಬುಧವಾರ, 22 ಫೆಬ್ರವರಿ 2023 (14:59 IST)
ಉದ್ಯಮಿಗಳಿಗೆ ದೇಶದ ಸಂಪತ್ತನ್ನ ಸರ್ಕಾರ ಅಡಮಾನ ಇಡ್ತಿದೆ ಅನ್ನೋ ವಿಪಕ್ಷಗಳ ಮಾತಿಗೆ ‌ಸಾಕ್ಷಿಯೆಂಬಂತೆ ಮತ್ತೊಂದು ತಾಜ ಉದಾಹರಣೆ ಸಿಕ್ಕಿದೆ. ದಶಕಳಿಂದ ರಾಜ್ಯ ಪೋಲೀಸ್ ಅಧಿಕಾರಿಗಳು ಬಳಸುತ್ತಿದ್ದ ಬಿಎಸ್ ಎನ್ ಎಲ್ ಗೆ ಗುಡ್ ಬೈ ಹೇಳಿ ಅಂಬಾನಿ ಒಡೆತನದ ಜಿಯೋ ಹಾಯ್ ಹೇಳಲು ಸರ್ಕಾರ ಹೆಜ್ಜೆ ಇಟ್ಟಿದೆ.
 
ಸರ್ಕಾರೀ ಸಾಮ್ಯದ ಬಿಎಸ್ ಎನ್ ಎಲ್ ಬಿಟ್ಚು ಜಿಯೋಗೆ ಪೋರ್ಟ್  ಆಗಲು ಪೋಲೀಸರಿಗೆ ಸರ್ಕಾರ ಸುತ್ತೊಲೆ ಹೊರಡಿಸಿದೆ.ರಾಜ್ಯಾದ್ಯಂತ ಬಿ ಎಸ್ ಎನ್ ಎಲ್ ರಾಜ್ಯಾದ್ಯಂತ ಸರಿಯಾಗಿ ನೆಟ್ ವರ್ಕ್ ಸಿಗ್ತಿಲ್ಲ  ಅನ್ನೋ‌ ಕಾರಣಕ್ಕೆ  ರಾಜ್ಯ ಪೋಲೀಸ್ ಇಲಾಖೆಯ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಿಎಸ್ಎನ್ ಎಲ್ ನಂಬರ್ ನ ಜಿಯೋ ನಂಬರ್ ಗೆ ಪೋರ್ಟ್ ಆಗುವಂತೆ ಸೂಚನೆ ನೀಡಲಾಗಿದೆ.ಇನ್ನೂ ಸ್ಟೇಷನ್ ಎಸ್ ಓ, ಇನ್ಸ್ಪೆಕ್ಟರ್ , ಎಸಿಪಿ, ಎಸ್ಪಿ, ಡಿಐಜಿ,ಐಜಿ, ಎಡಿಜಿ ಡಿಜಿ ಸೇರಿದಂತೆ‌ ಸಾವಿರಾರು ಅಧಿಕಾರಿಗಳು ಇದೇ ಬಿಎಸ್ ಎನ್ ಎಲ್ ಸಿಮ್ ದಶಕಗಳಿಂದ ಉಪಯೋಗ ಮಾಡ್ತಿದ್ರು. 
 
ಸದ್ಯ ಸರಿಯಾದ ನಿರ್ವಹಣೆ ಇಲ್ಲದೆ ಬಿಎಸ್ ಎನ್ ಎಲ್ ಮೂಲೆಗುಂಪಾಗಿದ್ದು ಇದೇ ಕಾರಣಕ್ಕೆ ಪೊಲೀಸ್ರು ತಮ್ಮ‌ಸಿಮ್‌ಗಳನ್ನ ಬಿಎಸ್ಎನ್ ಎಲ್ ಬಿಟ್ಟು ಜೊಯೋ ಪೋರ್ಟ್ ಆಗಲು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ