ಮೂರನೇ ಬಾರಿ ಗ್ರಾಮ ವಾಸ್ತವ್ಯ ಹೂಡಿದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್

ಮಂಗಳವಾರ, 30 ಜನವರಿ 2018 (10:47 IST)
ತುಮಕೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಈ ಹಿಂದೆ 2 ಬಾರಿ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದು ಈಗ ಮೂರನೇ ಬಾರಿ ಕೊರಟಗೆರೆ ಕ್ಷೇತ್ರದ ಕೋಳಾಲ ಹೋಬಳಿಯ ಎನ್.ಬೇವಿನಹಳ್ಳಿಯಲ್ಲಿ ಪರಮೇಶ್ವರ್ ಗ್ರಾಮ ವಾಸ್ತವ್ಯ ಹೂಡಿದ್ದಾರೆ.

 
ಎನ್.ಬೇವಿನಹಳ್ಳಿ ಗ್ರಾಮದ ರೈತ ರಂಗಧಾಮಯ್ಯ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ಪರಮೇಶ್ವರ್  ಅವರು ಮುದ್ದೆ ಊಟ ಸೇವಿಸಿ ನೆಲದ ಮೇಲೆ ಚಾಪೆ ಹಾಸಿ ಮಲಗಿದ್ದಾರೆ. ‘ಗ್ರಾಮವಾಸ್ತವ್ಯ ಪರಿಕಲ್ಪನೆ ಸಮಾಜಮುಖಿಯಾಗಿದೆ. ಗ್ರಾಮವಾಸ್ತವ್ಯದಿಂದ ಗ್ರಾಮದ ಸಮಸ್ಯೆ, ಹಳ್ಳಿ ಜನರ ಕಷ್ಟನಷ್ಟ ತಿಳಿಯುತ್ತದೆ. ಹೀಗಾಗಿ ಮುಂದಿನ ದಿನದಲ್ಲಿ ಪಕ್ಷದ ಎಲ್ಲಾ ಶಾಸಕರಿಗೂ ಗ್ರಾಮವಾಸ್ತವ್ಯ ಮಾಡುವಂತೆ ಫರ್ಮಾನು ಹೊರಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. ಹಾಗೆ ‘ಬಿಜೆಪಿ ಒಳಂಗಿಂದೊಳಗೆ ಓವೈಸಿ ಜೊತೆ ಮಾತುಕತೆ ನಡೆಸುತಿರುವುದು ನಮಗೆ ಮೊದಲೇ ಗೊತ್ತಿತ್ತು. ಮುಸ್ಲಿಂರನ್ನು ದ್ವೇಷಿಸುವ ಬಿಜೆಪಿ ಓವೈಸಿ ಸಖ್ಯ ಬೆಳೆಸಿದೆ. ಅವರಿಗೆ ನೈತಿಕತೆಯೇ ಇಲ್ಲ ಎಂದು ಅವರು  ಬಿಜೆಪಿ ವಿರುದ್ಧ ಹರಿಹಾಯ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ