ಹೊಡಿರಿ, ಬಡಿರಿ ಎಂದ ಕಾಂಗ್ರೆಸ್ ಮಾಜಿ ಸಚಿವ

ಗುರುವಾರ, 20 ಸೆಪ್ಟಂಬರ್ 2018 (15:54 IST)
ಕಾಂಗ್ರೆಸ್​ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಪ್ರಚೋದನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
 ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಶರಣ ಪ್ರಕಾಶ್​ ಪಾಟೀಲ್​ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಡಿಯೋವೊಂದು ಸದ್ಯ ವೈರಲ್​ ಆಗಿದೆ. ವಿಧಾನಸಭೆ ಚುನಾವಣೆ ವೇಳೆ ಎರಡು ಗುಂಪುಗಳ ನಡುವೆ ಗ್ರಾಮದಲ್ಲಿ  ಘರ್ಷಣೆಯಾಗಿತ್ತು. ಪಾಟೀಲ್ ಅವರ ಕಾರಿಗೆ ಮುತ್ತಿಗೆ ಹಾಕಿದ್ದರು. ಅದರ ಕುರಿತು ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರು, ಅವರು ಹತ್ತು ಹೊಡೆದ್ರೆ, ನೀವು ಒಂದಾದ್ರು ಹೊಡಿರಿ. ಸುಮ್ಮನೆ ಇರೋದು ಗಂಡಸತನ ಅಲ್ಲ. ಈಗ ಏನಾದರೂ ಆದ್ರೆ ನಾನು ನೋಡಿಕೊಳ್ಳುತ್ತೇನೆ ನೀವು ಹೊಡೀರಿ.  ಹೊಡೀರಿ  ನೀವು ಬಡಿರಿ ಅಂತ ನಾನು ಬಹಿರಂಗವಾಗಿ ಹೇಳೋಕೆ ಆಗಲ್ಲ ಎಂದಿದ್ದಾರೆ.

ನಾನು ಮನಸ್ಸು ಮಾಡಿದ್ರೆ ಮಂತ್ರಿಯಾಗಿದ್ದಾಗ ಅವರನ್ನೆಲ್ಲಾ ಒದ್ದು ಒಳಗೆ ಹಾಕಿಸಬಹುದಿತ್ತು. ಆದ್ರೆ ನಾನು ಹಾಗೆ ಮಾಡಿಲ್ಲ. ಹಾಗೆ ಮಾಡಿದ್ರೆ ಅಧಿಕಾರ ದುರುಪಯೋಗ ಮಾಡಿಕೊಂಡು ದೌರ್ಜನ್ಯ ಮಾಡ್ತಾರೆ ಅಂತಿದ್ರು. ಈಗ ನಾನು ಅಧಿಕಾರದಲ್ಲಿಲ್ಲ. ನಿಮಗೆ ಏನಾದರೂ ಆದರೆ ಸುಮ್ಮನಿರೋದಿಲ್ಲ ಎಂದು ಮಾತನಾಡಿರೋ ವಿಡಿಯೋ ವೈರಲ್​ ಆಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ