ಕೊಚ್ಚಿ ಹೋಗುತ್ತಿದ್ದ ಮಗುವನ್ನು ರಕ್ಷಿಸಲು ಹೋದವನೂ ನೀರು ಪಾಲು
ಶುಕ್ರವಾರ, 18 ಅಕ್ಟೋಬರ್ 2019 (13:48 IST)
ನದಿ ನೀರಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮಗುವಿನ ಜತಗೆ ರಕ್ಷಣೆಗೆ ಮುಂದಾದ ವ್ಯಕ್ತಿಯೂ ನೀರುಪಾಲಾಗಿರೋ ಹೃದಯವಿದ್ರಾವಕ ಘಟನೆ ನಡೆದಿದೆ.
ಸಲೀಂ (25), ಮುನ್ನಾ (3) ನೀರು ಪಾಲಾದವರಾಗಿದ್ದು, ಇವರು ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಶ್ರೀರಂಗಪಟ್ಟಣ ಹತ್ತಿರದ ಕಾವೇರಿ ಸಂಗಮದಲ್ಲಿ ದುರ್ಘಟನೆ ಸಂಭವಿಸಿದೆ.
ಮಗು ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗುತ್ತಿತ್ತು. ಇದನ್ನು ಗಮನಿಸಿದ ಸಲೀಂ ರಕ್ಷಣೆಗಾಗಿ ನೀರಿಗೆ ಧುಮುಕಿದ್ದಾನೆ. ಆದರೆ ಮಗುವಿನೊಂದಿಗೆ ಸಲೀಂ ಕೂಡ ಸಾವನ್ನಪ್ಪಿದ್ದಾನೆ. ಮೃತ ದೇಹಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.