3 ದಿನ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ತಮಿಳುನಾಡಿನ ಬಳಿಕ ರಾಜಧಾನಿಗೂ ಮಾಂಡೌಸ್ ಎಫೆಕ್ಟ್ ತಟ್ಟಿದ್ದು, ಇದೀಗ ಸಿಲಿಕಾನ್ ಸಿಟಿ ಬೆಂಗಳೂರು ಕೂಲ್ ಕೂಲ್ ಆಗಿದೆ. ಈಗಾಗಲೇ 2 ದಿನದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ತುಂತುರು ಮಳೆಯು ಇನ್ನು 3 ದಿನಗಳ ಕಾಲ ಬೆಂಗಳೂರಿನಲ್ಲಿ ಮುಂದುವೆರಯುವ ಮುನ್ಸೂಚನೆಯಿದೆ. ಚಂಡಮಾರುತದ ಭೀತಿ ನಡುವೆ ರಾಜ್ಯದಲ್ಲಿ ಮತ್ತೆ ವರುಣಾ ಅಬ್ಬರದ ಮುನ್ಸೂಚನೆಯಿದ್ದು, ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಳೆಯ ಬಗ್ಗೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆಯು ಗಾಳಿ ವೇಗವು ಹೆಚ್ಚಾಗುವ ಜೊತೆಗೆ ಕನಿಷ್ಠ ತಾಪಮಾನ ಕೂಡ ಇಳಿಕೆಯಾಗುವ ಎಚ್ಚರಿಕೆಯನ್ನು ನೀಡಿದೆ.