ಕಾವೇರಿ ಬಿಕ್ಕಟ್ಟು ಸರ್ಕಾರಕ್ಕೆ ಸಂಕಷ್ಟ...!

ಬುಧವಾರ, 23 ಆಗಸ್ಟ್ 2023 (19:38 IST)
ರಾಜ್ಯದ ಜಲ ವಿವಾದಗಳ ಕುರಿತು ಇಂದು ಸರ್ವ ಪಕ್ಷ ಸಭೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು‌.ಮಹದಾಯಿ,ಕಾವೇರಿ,ಮೇಕೆದಾಟು ಸೇರಿದಂತೆ ಜಲ ವಿವಾದಗಳ ಕುರಿತು ಇರುವಂತ ಸಮಸ್ಯೆಗಳನ್ನ, ಸರ್ಕಾರ ಸರ್ವ ನಾಯಕರ ಮುಂದೆ ಇಟ್ಟಿತು.ಕೆಲವು ಸಲಹೆಗಳನ್ನ ಜೆಡಿಎಸ್,ಬಿಜೆಪಿ ನಾಯಕರು ಹೇಳಿದ್ದಾರೆ. ಸರ್ಕಾರವು ವಿಪಕ್ಷಗಳ ಸಲಹೆಗಳನ್ನ ಸ್ವೀಕರಿಸಿದೆ.ಇನ್ನೂ ಸರ್ಕಾರದ ಕೆಲ ನಡೆಗಳನ್ನ ವಿಪಕ್ಷ ನಾಯಕರು  ವಿರೋಧಿಸಿದ್ದಾರೆ.ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಆಗಿಲ್ಲ ಇದರಿಂದ ಕೆಲವು ಜಲಾಶಯಗಳಲ್ಲಿ‌ ನೀರಿನ ಪ್ರಮಾಣ ಕಡಿಮೆ ಇದೆ.ಇದರಲ್ಲಿ‌ ಕೆ ಆರ್ ಎಸ್ ಡ್ಯಾಂ ಕೂಡಾ ಒಂದು.ಈಗಾ ಡ್ಯಾಮ್ ನಲ್ಲಿ 55 ಟಿಎಂಸಿ ನೀರು ಇದೆ ಇದರಲ್ಲಿ 15 ದಿನಗಳ ಕಾಲ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದೆ.ಇದರಿಂದ ರಾಜ್ಯದ ರೈತರಲ್ಲಿ ಆತಂಕ ಮೂಡಿಸಿದೆ.ಇದರಿಂದ ಪ್ರತಿಭಟನೆಗೆ ಮಾಡುತ್ತಿದ್ದಾರೆ.ಇವರ ಜೊತೆಗೆ ಬಿಜೆಪಿ,ಜೆಡಿಎಸ್ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದ್ರು

ವಿಪಕ್ಷಗಳ ಆಗ್ರಹ ಬೆನ್ನಲೆ ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಆಯೋಜನೆ ಮಾಡಿ ಇಂದು ಸಭೆ ನಡೆಸಿದೆ.ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಡಿಸಿಎಂ ಡಿಕೆಶಿವಕುಮಾರ್ ಮಾಜಿ ಸಿಎಂಗಳಾದ ಯಡಿಯೂರಪ್ಪ,ಕುಮಾರಸ್ವಾಮಿ,ಬಸವರಾಜ ಬೊಮ್ಮಾಯಿ ಸೇರಿದಂತೆ ಮೂರು ಪಕ್ಷದ ನಾಯಕರು ಭಾಗವಹಿಸಿದ್ರು.ಮೊದಲಿಗೆ ಜಲಸಂಪನ್ಮೂಲ ಸಚಿವ ಡಿಕೆಶಿವಕುಮಾರ್ ಕಾವೇರಿ ನೀರಿನ ಮಾಹಿತಿ‌ ನೀಡಿದ್ರು,ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆಯ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್‌ ವೈಫಲ್ಯದಿಂದಾಗಿ ಮಳೆ ಕೊರತೆ ಬಗ್ಗೆ ಚರ್ಚೆ ಆಯಿತು.ಇನ್ನೂ ಶುಕ್ರವಾರ ಮೂರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎಂದು ಮಾಹಿತಿಯನ್ನ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಭೆಗೆ ತಿಳಿಸಿದ್ರು.ಕಾವೇರಿ ವಿಚಾರವಾಗಿ ಕಾನೂನು ಹೋರಾಟಕ್ಕೆ ಸಭೆಯ ಎಲ್ಲಾ ನಾಯಕರು ಸಮ್ಮತಿ ಸೂಚಿಸಿದ್ರು.

ರ್ವ ಪಕ್ಷ ಸಭೆಯಲ್ಲಿ ಭಾಗಿಯಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ ೧0  ಸಾವಿರ ಕ್ಯುಸೆಕ್ಸ್ ನೀರು ಬಿಡುವ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯ ಇಲ್ಲಾ.ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿ ಒದಗಿಸಿಕೊಂಡಿರೋದು ಸರಿಯಲ್ಲಾ.ಸುಪ್ರೀಂ ಕೋರ್ಟ್ ನಲ್ಲಿ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟು ನೀರು ಬಿಡದಂತೆ ನೊಡಿಕೊಳ್ಳೊದು ಬಹಳ ಮುಖ್ಯ ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಹೇಳಿದರು... ಇನ್ನೂ ಕಾವೇರಿ ವಿಚಾರವಾಗಿ ಸುಪ್ರೀಂಕೋರ್ಟ್ ನಲ್ಲಿ ಪ್ರಬಲವಾಗಿ ವಾದ ಮಂಡನೆ ಮಾಡಲು ಸಲಹೆ ಕೊಡಲಾಗಿದೆ.ಏನ್ ಸಲಹೆ ಕೊಟ್ಟಿದ್ದೇವೆ ಅಂತ ಹೇಳಲು ಸಾಧ್ಯವಿಲ್ಲ.ಅನೇಕ ಸಲಹೆಗಳನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ. ಸರ್ಕಾರದವರು ರಾಜ್ಯದ ಜನರ ಹಿತ ಕಾಪಾಡೋ ಭರವಸೆ ನೀಡಿದ್ದಾರೆ.ನಾವು ರಾಜ್ಯದ ಜನರ ಹಿತಕ್ಕಾಗಿ ತೆಗೆದುಕೊಳ್ಳೊ ಉತ್ತಮ ನಿರ್ಧಾರಕ್ಕೆ ಬೆಂಬಲ ಕೊಡ್ತೀವಿ ಅಂತ ಹೇಳಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.

ಸರ್ವ ಪಕ್ಷ ಸಭೆಯಲ್ಲಿ ತೆಗೆದುಕೊಂಡಂತಹ ನಿರ್ಧಾರಗಳ ಬಗ್ಗೆ ತಿಳಿಸಿದ ಸಿಎಂ ಸಿದ್ದರಾಮಯ್ಯ ರೈತ ಸಂಘ, ಎಂಪಿ ಗಳು ಎಲ್ಲ ಪಕ್ಷದವರು ಕೂಡ ಇದ್ದರು.ಸರ್ಕಾರ ಪ್ರತಿನಿಧಿಸುವ ಲೀಗಲ್ ಟೀಂ ಕೂಡ ಭಾಗವಹಿಸಿದ್ದರು.ಜಲ ವಿವಾದ ಬಗ್ಗೆ ಭಾಷೆ ಗಡಿ ಬಗ್ಗೆಯಾಗಲಿ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ ಎಂಬುದನ್ನು ಎಲ್ಲಾರೂ ಸ್ಪಷ್ಟಪಡಿಸಿದ್ದಾರೆ.ಸರ್ಕಾರ  ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲ ಎಂದೂ ಕೂಡ ಹೇಳಿದ್ದಾರೆ.ಸುಪ್ರಿಂ ಹಾಗೂ ಟ್ರಿಬ್ಯುನಲ್ ನಲ್ಲಿ ಸಂಕಷ್ಟ ಸೂತ್ರ ತಯಾರಾಗಿಲ್ಲ. ಮೊದಲು ಸಂಕಷ್ಟ ಸೂತ್ರ ಆಗಬೇಕು, ಮೇಕೆದಾಟು ಜಲಾಶಯ ನಾವು ಕಟ್ಟಬೇಕು.ಆಗ ಇಂಥ ಸಂಕಷ್ಟ ಸ್ಥಿತಿ ಬಂದಾಗ ತಮಿಳುನಾಡಿಗೆ ನಾವೂ ನೀರು ಕೊಡಬಹುದು. ಯಾವುದೇ ಚರ್ಚೆ ಇಲ್ಲದೆ ಪುರಾವೆ ಇಲ್ಲದೆಯೇ ತಮಿಳುನಾಡು ವಿರೋಧ ಮಾಡ್ತಾ ಇದೆ.ಈ ಬಗ್ಗೆ ಹಲವು ನಾಯಕರು ಸಲಹೆಗಳನ್ನ ಕೊಟ್ಟಿದ್ದಾರೆ ಅದನ್ನ ಗಮನದಲ್ಲಿಟ್ಟುಕೊಂಡು,ಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಾಡಲು ನಮ್ಮ ಲೀಗಲ್ ಟೀಮ್ ಗೂ ಸೂಚನೆ ನೀಡಿದ್ದೇವೆ ಎಂದು ಹೇಳಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ