ಬೆಂಗಳೂರು-ಪಾಕ್ ಪರ ಘೋಷಣೆ ಸಂಬಂಧ ಮೂವರ ಬಂಧನ ವಿಚಾರದಲ್ಲಿ ಇವರ ನಡೆ ಆತಂತಕಾರಿ ಎಫ್ ಎಸ್ ಎಲ್ ರಿಪೋರ್ಟ್ ಬಂದು ನಾಲ್ಕು ದಿನ ಕಳೆದಿದೆ. ಎರಡು ದಿನಗಳ ಹಿಂದೆ NIA ಎಫ್‌ಐಆರ್ ಮಾಡಿಕೊಂಡಿದಕ್ಕೆ ಮೂವರ ಬಂಧನವಾಗಿದೆ.ಮಾಧ್ಯಮಗಳೇ ಇದನ್ನು ಪ್ರಚೋದಿಸುತ್ತಿವೆ ಎಂದು ಸರ್ಕಾರ ದೂರಿತು.ಪತ್ರಕರ್ತರನ್ನು ಗುರಿ ಮಾಡಿಕೊಂಡು ಮಾತನಾಡಿದ್ದರು.ಪಾಕ್ ಪರ ಘೋಷಣೆ ಕೂಗಿದವರ ಸಮರ್ಥನೆ ಮಾಡಿಕೊಂಡವರು ಕ್ಷಮೆ ಕೇಳಬೇಕು ಎಂದರು.
ಜವಾಬ್ದಾರಿ ಮರೆತು ಕೆಲ ಸಚಿವರು ದೇಶದ್ರೋಹಿಗಳ ಪರ ನಿಂತಿದ್ದು ದುರ್ದೈವ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ಧಾರೆ.ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಮಾಧ್ಯಮಗಳಲ್ಲಿ ಪಾಕ್ ಪರ ಘೋಷಣೆ ಸ್ಪಷ್ಟವಾಗಿದ್ದರು.ಆ ಸಂದರ್ಭದಲ್ಲಿ ಸಚಿವರು ದೇಶ ದ್ರೋಹಿಗಳ ರಕ್ಷಣೆಗೆ ನಿಂತಿದ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನೈತಿಕ ಪೋಲಿಸ್ ಗಿರಿ ನಡೆದಿದೆಯಲ್ವಾ? ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಯಿ ಅವರು, ಹಾವೇರಿ ಘಟನೆಗೂ ಕರಾವಳಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಘಟನೆಗೂ ಅಜಗಾಜಾಂತರ ವ್ಯತ್ಯಾಸವಿದೆ. ಈ ಎರಡು ಪ್ರಕರಣಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಹಾವೇರಿ ಪ್ರಕರಣದಲ್ಲಿ ಅತ್ಯಾಚಾರದಂತಹ ಹೀನ ಕೃತ್ಯ ನಡೆದಿದೆ ಎಂದು ತಿಳಿಸಿದರು.