ಮಹಿಳೆಯ ಮೇಲೆ ಕಳ್ಳತನ ಆರೋಪ; ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ

ಶನಿವಾರ, 12 ಫೆಬ್ರವರಿ 2022 (20:24 IST)
ಬೆಂಗಳೂರು: ಪೊಲೀಸರು ಎಫ್‌ಐಆರ್ ಹಾಕಿದರು ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನಾ ಉಮಾ ಎನ್ನುವ ಮಹಿಳೆ ಸೆಲ್ಫಿ ವಿಡಿಯೋ ಮಾಡಿದ್ದಾಳೆ.
ವಿಡಿಯೋದಲ್ಲಿ ರಮ್ಯ, ರೋಹಿತ್ ಎಂಬುವವರು ನನ್ನ ಸಾವಿಗೆ ಕಾರಣ ಎಂದು ಮಹಿಳೆ ಹೇಳಿಕೆ ನೀಡಿದ್ದು, ನಾನೇನು ತಪ್ಪು ಮಾಡಿಲ್ಲ ಆದರೂ ನನ್ನ ಮನೆಗೆ ಬಂದು ಸರ್ಚ್ ಮಾಡಲಾಗಿದೆ. ಇನ್ನು, ನನ್ನ ಸಾವಿಗೆ ರಮ್ಯ, ರೋಹಿತ್ ಕಾರಣ ಎಂದು ಹೇಳಿದ್ದು, ಅಲ್ಲದೇ ಮುಂದೆ ನನ್ನ ಮಗ ಮತ್ತು ಅಮ್ಮನಿಗೆ ಏನೂ ತೊಂದರೆ ಮಾಡಬಾರ್ದು ಅಂತ ಮಹಿಳೆ ಹೇಳಿದ್ದಾಳೆ.
ಇನ್ನು, ಕಳೆದ ಒಂದು ವಾರದಿಂದ ಠಾಣೆಗೆ ಕರೆತಂದು ಕೆ ಆರ್ ಪುರಂ ಪೊಲೀಸರು ವಿಚಾರಣೆ ಮಾಡ್ತಿದ್ದರು. ದಿನ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆವರೆಗೆ ಠಾಣೆಯಲ್ಲಿರಿಸಿಕೊಂಡು ವಿಚಾರಣೆ ಮಾಡಿ ಬಿಟ್ಟು‌ಕಳುಹಿಸ್ತಿದ್ದರು. ಈ ನಡುವೆಯೇ ಒಮ್ಮೆ ನನ್ನ ತಾಯಿ ಆತ್ಮಹತ್ಯೆಗೆ ಯತ್ಮಿಸಿದ್ರು. ಆಸ್ಪತ್ರೆ ಡಿಸ್ಚಾರ್ಜ್ ಬಳಿಕ ಮತ್ತೆ ಠಾಣೆಗೆ ಕರೆರಂದು ವಿಚಾರಣೆ ಮಾಡಿದ್ದಾರೆ. ಈಗಾಗಿ ಪೊಲೀಸರ ಕಿರುಕುಳದಿಂದ ತಾಯಿ ಉಮಾ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪುತ್ರ ಆರೋಪ ಮಾಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ