ಮೈತ್ರಿ ಬಗ್ಗೆ ದೇವೇಗೌಡ್ರು, ಕುಮಾರಸ್ವಾಮಿ ಅತಿ ಶೀಘ್ರದಲ್ಲೇ ತೆರೆ ಎಳೆಯುತ್ತಾರೆ : ನಿಖಿಲ್ ಕುಮಾರಸ್ವಾಮಿ

ಸೋಮವಾರ, 18 ಸೆಪ್ಟಂಬರ್ 2023 (09:57 IST)
ಬೀದರ್ : ಲೋಕ ಸಮರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅತಿ ಶೀಘ್ರದಲ್ಲೇ ತೆರೆ ಎಳೆಯುತ್ತಾರೆ ಎಂದು ಮಾಜಿ ಸಿಎಂ ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
 
ಬೀದರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಸಿನಿಮಾ ಶೂಟ್ ಪ್ರಾರಂಭ ಮಾಡಿದ್ದು, ರಾಜಕೀಯದಿಂದ ದೂರ ಉಳಿಯಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದರು.

ಒಂದು ಪ್ರಾದೇಶಿಕ ಪಕ್ಷ ಕಟ್ಟೋದು ಬಹಳ ಕಷ್ಟ. ಆದರೆ ದೇವೇಗೌಡರ ಹೋರಾಟದ ಶ್ರಮ ಹಾಗೂ ಉತ್ಸಾಹಿ ಕಾರ್ಯಕರ್ತರಿಂದ ಪಕ್ಷ ಕಟ್ಟಲಾಗಿದೆ. ಕುಮಾರಸ್ವಾಮಿ ಅವರು ಬಹಳ ಯಶಸ್ವಿಯಾಗಿ ಕಳೆದ 25 ವರ್ಷಗಳಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದು, ಬಹಳಷ್ಟು ಹಿರಿಯ ನಾಯಕರ ಕೊಡುಗೆ ಈ ಪಕ್ಷಕ್ಕೆ ಇದೆ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ