ರೇವಣ್ಣನ ರಾಸಲೀಲೆಯ ದಾಖಲೆಗಳಿವೆ ...!

geetha

ಶುಕ್ರವಾರ, 12 ಜನವರಿ 2024 (16:23 IST)
ಹಾಸನ :ಎಚ್‌.ಡಿ. ರೇವಣ್ಣ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ದೇವರಾಜೇಗೌಡ,  ನಿನಗೆ ನೇರವಾಗಿ ಸವಾಲು ಹಾಕುತ್ತಿದ್ದೇನೆ. ನೀನು ಗಂಡಸಾಗಿದ್ದರೆ ನನ್ನೆದುರು ಬಾ. ನಿನ್ನ ಅಕ್ರಮಗಳನ್ನು ದಾಖಲೆ ಸಹಿತ ತೆರೆದಿಡುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ, ನಿನ್ನ ಮಗ ತನ್ನ ಅಶ್ಲೀಲ ಚಿತ್ರಗಳನ್ನು ಬಿಡುಗಡೆ ಮಾಡಾರದೆಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. 

ಎಚ್‌.ಡಿ. ರೇವಣ್ಣ ಮತ್ತು ಅವರ ಕುಟುಂಬದ ಎಲ್ಲಾ ಅಕ್ರಮಗಳ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅವರು ಗಂಡಸಾಗಿದ್ದರೆ ಹೊರಗೆ ಬರಲಿ ಎಂದು ವಕೀಲ ದೇವರಾಜೇ ಗೌಡ ಸವಾಲು ಹಾಕಿದ್ದಾರೆ. ರೇವಣ್ನ ಕುಟುಂಬದ ರಾಸಲೀಲೆಗಳ ಬಗ್ಗೆಯೂ ನನ್ನ ಬಳಿ ಮಾಹಿತಿಯಿದೆ .ಆದರೆ ಎಚ್‌. ಡಿ. ಕುಮಾರಸ್ವಾಮಿ ಅವರ ಮೇಲಿನ ಅಭಿಮಾನದಿಂದ ಬಿಡುಗಡೆ ಮಾಡಿಲ್ಲ ಎಂದು ದೇವರಾಜೇಗೌಡ ಹೇಳಿದ್ದಾರೆ. 

ಹಾಸನದ ಎನ್‌.ಆರ್‌.ವೃತ್ತದಲ್ಲಿ ದೊಡ್ಡ ಡಿಸ್‌ಪ್ಲೇ ಹಾಕಿ ಅದರಲ್ಲಿ ನಿನ್ನ ವಿಡಿಯೋ ಪ್ರದರ್ಶಿಸುತ್ತೇನೆ. ಕೋರ್ಟ್‌ ತಡೆ ತೆರವಾದ ಬಳಿಕ ವಿಡಿಯೋ ಬಿಡುಗಡೆ ಮಾಡುತ್ತೇನೆ. ಮರ್ಯಾದೆಯಿಂದ ಬದುಕಲು ಇದು ನಿನ್ನ ಕುಟುಂಬಕ್ಕೆ ಕೊನೆ ವಾರ್ನಿಂಗ್‌ ಎಂದು ದೇವರಾಜೇಗೌಡ ಗುಡುಗಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ