ನಾಲ್ವರು ನಾಯಕರ ಮಧ್ಯೆ ಮಾತುಕತೆ ಆಗಿದೆ

ಮಂಗಳವಾರ, 23 ಮೇ 2023 (17:18 IST)
ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಸದ ಡಿ.ಕೆ. ಸುರೇಶ್ ನಿವಾಸದ ಬಳಿ ಮಾತನಾಡಿದ ಅವರು, ಎಂ.ಬಿ. ಪಾಟೀಲ್ ಹೇಳಿಕೆ ನಾನು ನೋಡಿಲ್ಲ. ಆದರೆ ಏನೇ ಮಾತುಕತೆ ಆಗಿದ್ರೂ ಅದು ನಾಲ್ವರು ನಾಯಕರ ಮಧ್ಯೆ ಆಗಿರುವುದು. ಎಐಸಿಸಿ ಅಧ್ಯಕ್ಷರು, ಉಸ್ತುವಾರಿ ಹಾಗೂ ಇಬ್ಬರು ನಾಯಕರ ನಡುವೆ ಮಾತುಕತೆ ಆಗಿದೆ. ಏನೇ ಇದ್ದರೂ ಅದು ಅವರಿಗೆ ಮಾತ್ರ ಗೊತ್ತಿದೆ. ನಮಗೆ ಸರ್ಕಾರ ಚೆನ್ನಾಗಿ ನಡೆಸಬೇಕು, ಜನರ ನಿರೀಕ್ಷೆ ಈಡೇರಿಸಬೇಕು. ವರಿಷ್ಟರ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ