ಗೃಹ ಸಚಿವರ ವಿರುದ್ಧವೇ ಮರ್ಡರ್ ಕೇಸ್ ಇದೆ : ಸಿದ್ದರಾಮಯ್ಯ
ಹೀಗಿರುವಾಗ ಬಿಜೆಪಿಗೆ ಇನ್ನು ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಹೇಳುವುದೊಂದು, ಮಾಡುವುದು ಮತ್ತೊಂದು. ಹೀಗಾಗಿ ಅವರಿಗೆ ಯಾವುದೇ ನೈತಿಕತೆ ಇಲ್ಲ.
ತತ್ವದ ಬಗ್ಗೆ ಗೊತ್ತಿಲ್ಲ. ಕೋಮುವಾದಿಯ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಹೇಳುವ ಮೂಲಕ ಸಿ.ಟಿ.ರವಿ ವಿರುದ್ದ ಗುಡುಗಿದರು.