ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು

ಗುರುವಾರ, 24 ನವೆಂಬರ್ 2022 (10:17 IST)
ಹಾಸನ : ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಆಗಿರುವ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತಿದ್ದು, ಸತ್ಯ ಏನೆಂಬುದು ತಿಳಿಯಲಿದೆ.
 
ಆಗ ಯಾರಿಗೆ ಅಂಟು ರೋಗ ಇದೆ ಎಂದು ಜನ ತೀರ್ಮಾನ ಮಾಡ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಯಗೊಂಡನಹಳ್ಳಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸತ್ಯವನ್ನು ಎದುರಿಸುವ ಕೆಲಸವನ್ನು ಮಾಡಲಿ.

ಅದು ಬಿಟ್ಟು ನಮ್ಮ ಕಾಲದಲ್ಲಿ ಈ ರೀತಿ ಆಗಿಲ್ಲ, ನಮ್ಮ ಕಾಲದಲ್ಲಿ ಆಗಿದ್ರೆ, ಈ ರೀತಿ ಮಾತನಾಡುವುದು ಜವಾಬ್ದಾರಿ ಕೆಲಸ ಅಲ್ಲ. ನಾವೇನು ಹೇಳಿದ್ದೇವು ಅದಕ್ಕೆ ದಾಖಲೆಯನ್ನು ಕೊಡುತ್ತಿದ್ದೇವೆ. ಅವರು ಅದನ್ನು ಎದುರಿಸಲಿ ಅಷ್ಟೇ ಎಂದು ಸವಾಲು ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ