ಗಡಿ ಜಿಲ್ಲೆಯಲ್ಲಿ ಹೋಳಿ ಸಂಭ್ರಮ

ಗುರುವಾರ, 21 ಮಾರ್ಚ್ 2019 (18:21 IST)
ದೇಶಾದ್ಯಂತ ಇಂದು ಹೋಲಿ‌ ಹಬ್ಬದ ಸಂಭ್ರಮ. ಗಡಿ ಜಿಲ್ಲೆಗಳಲ್ಲಿಯೂ ಬಣ್ಣದ ಓಕಳಿ ಜೋರಾಗಿತ್ತು.

 ಬರದನಾಡು ಬೀದರ್ ಜಿಲ್ಲೆಯಲ್ಲಿ ಇಂದು ಬಣ್ಣ ಎರಚುವ ಮೂಲಕ ಸಂಭ್ರದಿಂದ ಹೋಳಿ‌ಹಬ್ಬ ಆಚರಿಸಲಾಯಿತು.. ನಗರದ ವಿವಿಧೆಡೆ ಚಿಕ್ಕಮಕ್ಕಳಿಂದ ‌ಹಿಡಿದು ವೃದ್ಧರ ವರೆಗೂ ಬಣ್ಣ ಹಚ್ಚಿಕೊಂಡು ಕುಣಿದು ಕುಪ್ಪಳಿಸುವ ಮೂಲಕ ಹಬ್ಬ ಆಚರಿಸಿದ್ರು.

ಗಂಡು ಹೆಣ್ಣು ಭೇದವಿಲ್ಲದೆ ನಗರದಾದ್ಯಂತಾ ಸಂಭ್ರಮದಿಂದ ಹಬ್ಬವನ್ನು ಆಚರಿಸಿದ್ರು. ಇನ್ನು ಬೀದರ್ ಸಂಸದ ಭಗವಂತ ಖೂಬಾ ಮನೆ ಬಳಿ ಜಮಾಯಿಸಿದ ಜನ್ರು, ಸಂಸದರಿಗೆ ಬಣ್ಣ ಹಚ್ಚುವ ಮೂಲಕ  ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ