ಗುಮ್ಮಟನಗರಿಯಲ್ಲಿ ರಂಗ ಬರಸೇ ಸಂಭ್ರಮ…

ಗುರುವಾರ, 21 ಮಾರ್ಚ್ 2019 (18:50 IST)
ಗುಮ್ಮಟ ನಗರಿ ವಿಜಯಪುರದಲ್ಲಿ ಬಣ್ಣದಾಟದ ಸಡಗರ ಮನೆ ಮಾಡಿತ್ತು.

ಹೋಳಿ ಹುಣ್ಣಿಮೆ ಪ್ರಯುಕ್ತ ರಂಗ ಬರಸೇ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಯುವ ಮುಖಂಡ ಶಾಶ್ವತಗೌಡ ಪಾಟೀಲ್ ನೇತೃತ್ವದಲ್ಲಿ ಆಯೋಜನೆ ಮಾಡಿದ ರಂಗ ಬರಸೇ ಕಾರ್ಯಕ್ರಮದಲ್ಲಿ ನೂರಾರು ಯುವ ಜನತೆ ಪಾಲ್ಗೊಂಡು ಸಂಭ್ರಮಿಸಿದರು.

ತಮ್ಮ ತೋಟದ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ ಶಾಶ್ವತಗೌಡರ ಕಾರ್ಯಕ್ರಮದಲ್ಲಿ ವಿವಿಧ ‌ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಂಗ ಬರಸೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರಸ್ಪರ ಬಣ್ಣ ಎರಚಿಕೊಂಡು ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿ ಖುಷಿ ಪಟ್ರು.

ಪೊಲೀಸ್ ಹಾಗೂ ಬೌನ್ಸರ ಗಳ ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ