ಪರಿವರ್ತನಾ ಯಾತ್ರೆಯಲ್ಲಿ ಅಶಿಸ್ತು, ಗೊಂದಲಗಳಿವೆ: ಕೆ.ಎಸ್. ಈಶ್ವರಪ್ಪ

ಸೋಮವಾರ, 4 ಡಿಸೆಂಬರ್ 2017 (17:30 IST)
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಶಿಸ್ತು ಮತ್ತು ಗೊಂದಲಗಳಿರುವುದು ನಿಜ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಪಕ್ಷವಾಗಿದೆ. ಅತಿ ದೊಡ್ಡ ಪಕ್ಷದಲ್ಲಿ ಅಶಿಸ್ತು, ಗೊಂದಲಗಳಿರುವುದು ಸಹಜವಾಗಿದೆ. ಆದರೆ, ಪ್ರತಿಯೊಬ್ಬರು ಬಿಜೆಪಿ ಪಕ್ಷದ ಕಟ್ಟಾಳುಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.  
 
ಮುಂಬರುವ ದಿನಗಳಲ್ಲಿ ಗೊಂದಲಗಳನ್ನು ಪರಿಹರಿಸಿಕೊಂಡು ಚುನಾವಣೆ ಪ್ರಚಾರದಲ್ಲಿ ಒಂದಾಗಿ ಮುಂದೆ ಸಾಗುತ್ತೇವೆ. ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆದು ಸರಕಾರ ರಚಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಘೋಷಿಸಿದರು.
 
ಸಿಎಂ ಸಿದ್ದರಾಮಯ್ಯ ಹಿಂದುಗಳಿಗೊಂದು ಮುಸ್ಲಿಮರಿಗೊಂದು ನೀತಿ ಜಾರಿಗೆ ತಂದಿದೆ. ಇಂತಹ ನೀತಿಯ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ