'ಮಾಸ್ಕ್'ಧಾರೀ ಲಂಕಾ ಕ್ರಿಕೆಟಿಗರಿಗೆ ಮಂಗಳಾರತಿ!

ಸೋಮವಾರ, 4 ಡಿಸೆಂಬರ್ 2017 (17:23 IST)
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ನ ದ್ವಿತೀಯ ದಿನ ಫೀಲ್ಡಿಂಗ್ ಮಾಡುತ್ತಿದ್ದಾಗ ವಾಯುಮಾಲಿನ್ಯದ ನೆಪದಲ್ಲಿ ಮಾಸ್ಕ್ ಹಾಕಿಕೊಂಡು ಆಡುತ್ತಿದ್ದುದಲ್ಲದೆ, ಪದೇ ಪದೇ ಪಂದ್ಯ ನಿಲ್ಲಿಸಿ ಶ್ರೀಲಂಕಾ ಆಟಗಾರರ ವರ್ತನೆಯನ್ನು ಮಾಜಿ ನಾಯಕ ಸೌರವ್ ಗಂಗೂಲಿ ಪ್ರಶ್ನಿಸಿದ್ದಾರೆ.
 

ನಿನ್ನೆ ಫೀಲ್ಡಿಂಗ್ ಮಾಡುವಾಗ ಆಟಗಾರರಿಗೆ ಮಾಯು ಮಾಲಿನ್ಯದಿಂದಾಗಿ ಕಿರಿ ಕಿರಿಯಾಯಿತೆಂದು ಮಾಸ್ಕ್ ಹಾಕಿಕೊಂಡು ಆಡಿದರು. ಆದರೆ ಇಂದು ಬ್ಯಾಟಿಂಗ್ ಮಾಡುವಾಗ ಅವರ ಯಾವುದೇ ಬ್ಯಾಟ್ಸ್ ಮನ್ ಮಾಸ್ಕ್ ಹಾಕಿಕೊಂಡು ಮೈದಾನಕ್ಕೆ ಇಳಿಯಲಿಲ್ಲ. ಪೆವಿಲಿಯನ್ ನಲ್ಲಿ ಕೂತವರ ಮುಖದಲ್ಲೂ ಮಾಸ್ಕ್ ಇರಲಿಲ್ಲ.

ಅಂದರೆ ಈವತ್ತು ವಾಯು ಮಾಲಿನ್ಯವಿದೆ ಎಂದು ಅವರಿಗೆ ಅನಿಸಿಲ್ಲವಾ? ಇದೆಲ್ಲಾ ನೋಡಿದರೆ ಅವರ ವರ್ತನೆ ಬಗ್ಗೆ ಸಂಶಯ ಮೂಡುತ್ತದೆ ಎಂದು ಗಂಗೂಲಿ ಟೀಕಿಸಿದ್ದಾರೆ. ಲಂಕಾ ಆಟಗಾರರ ಈ ವರ್ತನೆಗೆ ಗಂಗೂಲಿ ಮಾತ್ರವಲ್ಲ, ಟ್ವಿಟರ್ ನಲ್ಲೂ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ