ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದು,,ಇನ್ನು ಕೆಲವೇ ವಾರಗಳಷ್ಟೇ ಮತದಾನ ದಿನಕ್ಕೆ ಬಾಕಿ ಉಳಿದಿದೆ. ಈ ಹಿನ್ನೆಲೆ ಬೃಹತ್ ಕಾರ್ಯಕ್ರಮಗಳನ್ನ ಮಾಡೋದು, ರೋಡ್ಶೋಗಳ ನಡ್ಸೋದು, ಸಮಾವೇಶ, ಸಮಾರಂಭಗಳನ್ನ ಮಾಡೋದು ಅಭ್ಯರ್ಥಿಗಳಿಗೆ ಅನಿವಾರ್ಯವೂ ಆಗಿದೆ. ಹೀಗಾಗಿ ಟಮಟೆ ಹಾಗೂ ಬ್ಯಾಂಡ್ ಸೆಟ್ ಕಲಾವಿದರಿಗೆ ಈ ಬಾರಿ ಎಲ್ಲಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದೆ.
ದಿನದಿಂದ ದಿನಕ್ಕೆ ಕರ್ನಾಟಕದ ಚುನಾವಣಾ ಆಖಾಡ ಕಾವೇರ್ತಿದೆ..ಈಗಾಗಲೇ ಎಲ್ಲಾ ಪಕ್ಷದ ಅಭ್ಯರ್ಥಿಗಳು ಪ್ರಚಾರದ ಕಣಕ್ಕೆ ತಾ ಮುಂದು ನಾ ಮುಂದು ಅಂತ ರೋಡಿಗಿಳಿದು,ಸೌಂಡ್ ಸೆಟ್ಟಪ್ನೊಂದಿಗೆ ರೆಡಿಯಾಗ್ತ ಇದ್ದಾರೆ... ನಾಮಿನೇಷನ್ ಕೂಡ ಕೊನೆಗೊಂಡಿದ್ದು, ಪ್ರಚಾರ ಭರಾಟೆ ಜೋರಾಗಿದೆ ..ಈ ಹಿನ್ನೆಲೆ ಸದ್ಯಕ್ಕೆ ನಗರದ ರಸ್ತೆಯೆಲ್ಲೆಡೆ ತಮಟೆ,ಬ್ಯಾಂಡ್ ಸೆಟ್ ಗಳು ಸೌಂಡ್ ಮಾಡ್ತಿವೆ ..ಇಷ್ಟು ದಿನ ಬರೀ ಜಾತ್ರೆ ಸಂಭ್ರಮದಲ್ಲಿ ಐತಲಕ್ಕಡಿ ಸೌಂಡ್ ಮಾಡ್ತ ಇದ್ದ ಥಮಟೆಗಳಿಗೆ ಇವಾಗ ಎಲೆಕ್ಷನ್ ಪ್ರಚಾರಕ್ಕೆ ಬೇಡಿಕೆ ಹೆಚ್ಚಾಗಿದೆ.
ಇನ್ನೂ ಶೇ.20 ರಿಂದ 50 ರಷ್ಟು ಹೆಚ್ಚಿನ ಸಂಭಾವನೆಯನ್ನ ಕೇಳಲಾಗುತ್ತಿದೆ. ಸದ್ಯಕ್ಕೆ ವ್ಯಾಪಾರ ಉತ್ತಮವಾಗಿದ್ದು, ಎಲೆಕ್ಷನ್ ಮುಗಿದ ನಂತರ ಡಿಮ್ಯಾಂಡ್ ಆಗುವ ಸಾಧ್ಯತೆಯಿರುವುದರಿಂದ ಸಂಭಾವನೆ ಕೊಂಚ ಮಟ್ಟಿಗೆ ಹೆಚ್ಚಾಗಿದೆ ಅಂತಾ ಬ್ಯಾಂಡ್ಸೆಟ್ ಮಾಲೀಕರು ಹೇಳುತ್ತಿದ್ದಾರೆ.