ರಾಜ್ಯದಲ್ಲಿ ಧಾರ್ಮಿಕ ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್
ರಾಜ್ಯಾದ್ಯಂತ ಪಿಎಫ್ ಐ ಕಾರ್ಯಕರ್ತರ ಬಂಧನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾಜದಲ್ಲಿ ಅಶಾಂತಿ ಮತ್ತು ದ್ವೇಷ ಸೃಷ್ಟಿಸಿದ್ರೆ ಕ್ರಮ ಆಗಬೇಕು. ಅಂತಹ ಯಾವುದೇ ಸಂಘಟನೆ ವಿರುದ್ಧ ಕ್ರಮಕ್ಕೆ ಎಲ್ಲಾ ಧರ್ಮದ ಸಹಮತ ಇದೆ.
ಕಾನೂನು ಕೈಗೆತ್ತಿಕೊಳ್ಳುವವರನ್ನ ಹದ್ದುಬಸ್ತಿನಲ್ಲಿಡೋದು ಸರ್ಕಾರದ ಜವಾಬ್ದಾರಿ. ಶಾಂತಿ ಸೌಹಾರ್ದದ ವಾತಾವರಣ ಸರ್ಕಾರ ನಿರ್ಮಾಣ ಮಾಡಬೇಕು.
ನಮ್ಮ ಧರ್ಮದ ಜೊತೆ ಎಲ್ಲಾ ಧರ್ಮ ನ್ಯಾಯಯುತ ತನಿಖೆಗೆ ಬೆಂಬಲ ಕೊಡುತ್ತದೆ. ತಾರತಮ್ಯ ಮತ್ತು ಅನ್ಯಾಯ ಯಾರಿಗೂ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು.