ಗ್ಯಾರೆಂಟಿ ಯೋಜನೆಗಳಿಗಿಲ್ಲ ಕಂಟಕ

geetha

ಮಂಗಳವಾರ, 30 ಜನವರಿ 2024 (18:32 IST)
ತುಮಕೂರು : ಬೃಹತ್‌ ಗಾತ್ರದ ಬಜೆಟ್‌ ಮಂಡನೆಯಾಗುತ್ತಿದೆ ಎಂದರೆ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ ಎಂದರ್ಥ ಎಂದು ವಿಶ್ಲೇಷಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರ ದಿವಾಳಿಯಾಗಲಿದೆ ಎನ್ನುವವರಿಗೆ ನಮ್ಮ ಬಜೆಟ್‌ ಉತ್ತರ ನೀಡಲಿದೆ.2024-25 ಸಾಲಿನಲ್ಲಿ 3.80 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯ ಪಟ್ಟಿಯನ್ನು ಮಂಡಿಸಲಾಗುವುದು ಎಂದು ತುಮಕೂರಿನಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಘೋಷಿಸರುವ ಗ್ಯಾರೆಂಟಿ ಯೋಜನೆಗಳಿಂದ ದಿವಾಳಿಯಾಗಿಲ್ಲ. ಯಾವ ಕಾರಣಕ್ಕೂ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದರು. ಗ್ಯಾರೆಂಟಿ ಯೋಜನೆಗಳಿಂದಾಗಿ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ