ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯೇ ಇಲ್ಲ: ಸಚಿವ ಮಹಾದೇವಪ್ಪ

ಶುಕ್ರವಾರ, 29 ಏಪ್ರಿಲ್ 2016 (16:25 IST)
ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯೇ ಇಲ್ಲ. ಮುಂಬರುವ 2018ರವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಸಚಿವ ಮಹಾದೇವ್ ಪ್ರಸಾದ್ ಹೇಳಿದ್ದಾರೆ
 
ದಲಿತರು ಮುಖ್ಯಮಂತ್ರಿ, ಪ್ರಧಾನಿಯಾಗಬೇಕು ಎನ್ನುವ ಆಶಯವಿದೆ. ಸೂಕ್ತ ಸಮಯದಲ್ಲಿ ಸಮರ್ಥ ಅಭ್ಯರ್ಥಿ ದೊರೆತಲ್ಲಿ ಹೈಕಮಾಂಡ್ ದಲಿತ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ನೀಡಲಿದೆ ಎಂದರು.
 
ಮುಖ್ಯಮಂತ್ರಿಗಳ ಬದಲಾವಣೆಯಾಗಲಿದೆ ಎನ್ನುವ ವರದಿಗಳು ಆಧಾರರಹಿತವಾಗಿವೆ. ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮ ಮತ್ತು ವಿಪಕ್ಷಗಳ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
 
ಡಾ.ಅಂಬೇಡ್ಕರ್ ಆಶಯದಂತೆ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎನ್ನುವ ಬಯಕೆ ಎಲ್ಲರಿಗಿದೆ. ಆದರೆ, ಸರಿಯಾದ ಸಮಯ ಸಂದರ್ಭ ಬಂದಾಗ ದಲಿತ ವ್ಯಕ್ತಿ ಮುಖ್ಯಮಂತ್ರಿಯಾಗಲಿದ್ದಾರೆ ಅನುಮಾನ ಬೇಡ ಎಂದು ಸಚಿವ ಮಹಾದೇವ್ ಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ