ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ

ಸೋಮವಾರ, 25 ಸೆಪ್ಟಂಬರ್ 2023 (19:42 IST)
ಅಧಿಕಾರದಲ್ಲಿ ಇದ್ದಾಗ ಯಾರು ಕೂಡ ಬೆಂಬಲ ನೀಡಿಲ್ಲ, ಈಗ ಅಧಿಕಾರದಲ್ಲಿ ಇಲ್ಲದಿದ್ದಾಗ ಬಂದ್‌ಗೆ ನಾವು ಬೆಂಬಲ ಕೊಡುತ್ತೀವಿ ಅಂತ ಹೇಳುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಸಾ.ರಾ.ಗೋವಿಂದು ಆಕ್ರೋಶ ವ್ಯಕ್ತಡಿಸಿದ್ರು..ಅಲ್ಲದೆ ಇವರಿಗೆ ಕಾವೇರಿ ನೀರಿನ ಬಗ್ಗೆ ಮಾತನಾಡೋಕೆ ಯಾವುದೇ ರೀತಿ ನೈತಿಕ ಹಕ್ಕಿಲ್ಲ ಎಂದು ಕಿಡಿಕಾಡಿದ್ರು.ಬೆಂಗಳೂರಿನಲ್ಲಿ ಮಾತನಾಡಿದ ಸಾ.ರಾ.ಗೋವಿಂದು, ಕಾವೇರಿ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ, ಎಎಪಿಯಲ್ಲಿ ಯಾರಿದ್ದಾರೆ ಕನ್ನಡ ಪರ ಹೋರಾಟಗಾರರು, ನಾಳೆ ಬಂದ್‌ ಮಾಡಲು ಹೊರಟ್ಟಿದ್ದಾರೆ...ಆದರೆ ನಾವು 29 ನೇ ತಾರೀಕು ಇಡೀ ಕರ್ನಾಟಕ ಬಂದ್ ಮಾಡ್ತೀವಿ, ಮಹದಾಯಿ ವಿಚಾರವಾಗಿ ನಾವು ಬೆಂಬಲ ನೀಡಿದ್ದೇವೆ..ಕಾವೇರಿ ವಿಷಯದಲ್ಲಿ ಕೇವಲ ಬೆಂಗಳೂರು ಬಂದ್ ಮಾಡುವುದು ಸರಿಯಲ್ಲ ಎಂದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ