ಬಜೆಟ್ ಮಂಡನೆ ಯಾವುದೇ ವಿರೋಧ ಇಲ್ಲ: ಸಚಿವ ವೆಂಕಟರಾವ್ ನಾಡಗೌಡ
ಶುಕ್ರವಾರ, 29 ಜೂನ್ 2018 (17:44 IST)
ಬಜೆಟ್ ಮಂಡನೆ ಯಾವುದೇ ವಿರೋಧ ಇಲ್ಲ. ಜುಲೈ 5 ರಂದು ಬಜೆಟ್ ಮಂಡನೆಯಾಗಲಿದೆ. ಈ ಕುರಿತು ಯಾವುದೇ ಸಂಶಯಬೇಡ ಅಂತಾ ಹುಬ್ಬಳ್ಳಿಯಲ್ಲಿ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ರು.
ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಬಜೆಟ್ ಮಂಡನೆ ಮಾಡುವುದು ಬೇಡ ಎಂದು ಎಲ್ಲಿಯೂ ಹೇಳಿಲ್ಲ ಸಚಿವರು ಹೇಳಿದರು. ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬುದು ಸುಳ್ಳು, ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಇರುತ್ತೆ.
ಈ ಸರ್ಕಾರವನ್ನ ದೇವರೇ ರಚನೆ ಮಾಡಿದ್ದಾನೆ, ಆ ದೇವರೇ ಐದು ವರ್ಷ ನಡೆಸುತ್ತಾನೆ ಅಂತಾ ಸಚಿವ ನಾಡಗೌಡ ಹೇಳಿದರು.
ನನ್ನ ಇಲಾಖೆಯಲ್ಲಿ ಪಶು ವೈದ್ಯರು ಕೊರತೆ ಇದೆ. ವೈದ್ಯರ ಕೊರತೆ ನೀಗಿಸಲು 500 ಪಶು ವೈದ್ಯರ ನೇಮಕ ಮಾಡಲಾಗುವುದು. ಬಜೆಟ್‌ನಲ್ಲಿ ಪಶು ಇಲಾಖೆಗೆ 2500 ಕೋಟಿ ಅನುಧಾನ ಮೀಸಲಿಡಲು ಕೇಳಿಕೊಂಡಿದ್ದೆವೆ. ಇಸ್ರೇಲ್ ತಂತ್ರಜ್ಞಾನವನ್ನ ಬಳಿಸಿ ಮೇವು ಬೆಳೆಯಲು ಪೈಲೆಟ್ ಯೋಜನೆ ರೂಪಿಸಲಾಗಿದೆ.
ಕೃಷಿ ಜಮೀನು ಇಲ್ಲದ ರೈತರು ಹೈನುಗಾರಿಗೆ ಮಾಡಬಹುದು ಅಂತಾ ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ್ ಹೇಳಿದರು.