ಮಂಗಳೂರು: ಧರ್ಮಸ್ಥಳದಲ್ಲಿ ನಡೆದ ಬೆಳವಣಿಗೆ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿಯನ್ನ ಬಂಧಿಸುವುದಕ್ಕೆ ನಿಮ್ಮಿಂದ ಆಗೋದಿಲ್ವಾ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಭಯಚಂದ್ರ ಜೈನ್ ಸರ್ಕಾರದ ವಿರುದ್ಧವೇ ಗರಂ ಆಗಿದ್ದಾರೆ.
ಮಾಧ್ಯಮಗಳ ಜೊತೆ ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಮಾಸ್ಕ್‌ಮ್ಯಾನ್ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆಯದಿದ್ದರೆ ಅದಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು.
ಆರಂಭದಲ್ಲೇ ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ನಡೆಯಬೇಕಿತ್ತು. ಇನ್ನು ಮುಂದೆ ಅನಾಮಿಕನನ್ನು ಧರ್ಮಸ್ಥಳ ದ್ವಾರ ದಾಟಿ ದೇವಸ್ಥಾನದ ವಠಾರಕ್ಕೆ ಬರಲು ನಾವು ಬಿಡುವುದಿಲ್ಲ. ಮತ್ತೆ ಬಾಹುಬಲಿ ಬೆಟ್ಟಕ್ಕೆ ಬಂದರೆ ನಾನು ಮುಂದೆ ನಿಲ್ಲುತ್ತೇನೆ ಎಂದರು.
ಮಹೇಶ್ ಶೆಟ್ಟಿಯ ಬಂಧಿಸಿದ ನಂತರವೇ ಮುಂದಿನ ತನಿಖೆ ನಡೆಯಬೇಕು. ಇನ್ನೂ ಆತನ ಬಂಧನ ಕಷ್ಟದ ವಿಚಯವಲ್ಲ, ಆದರೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡೋಣ ಎಂದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಿರಂತರ ಸುಳ್ಳು ಅಪಪ್ರಚಾರ ನಡೆಯುತ್ತಿದೆ. ಮುಸುಕುಧಾರಿಯ ಬಳಿಕ ಹೊಸ ದೂರುದಾರರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ನಾಡಿಗೆ ಅಪಾರ ಕೊಡುಗೆ ನೀಡಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ದ ಸಲ್ಲದ ಮಾತಿಗೆ ತಡೆ ಬೀಳಬೇಕಿದೆ ಎಂದು ತಿಳಿಸಿದರು.