ಚುನಾವಣಾ ನೀತಿ ಸಂಹಿತೆ ಜಾರಿಯಾದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ..!

ಬುಧವಾರ, 29 ಮಾರ್ಚ್ 2023 (19:08 IST)
ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ಪ್ರತಿ ವರ್ಷದಂತೆ ಈ ಬಾರಿಯೂ ಕರಗ ಅದ್ದೂರಿಯಾಗಿ ನೆರವೇರುತ್ತೆ.ನೀತಿ ಸಂಹಿತೆ ಹಿನ್ನಲೆ ವೇದಿಕೆ ಕಾರ್ಯಕ್ರಮ ಇರುವುದಿಲ್ಲ.ಕರಗ ತಯಾರಿ ಸಭೆ ಕೆಲ ಸೂಚನೆಯನ್ನ ಅಧಿಕಾರಿಗಳು ನೀಡಿದ್ದಾರೆ.ಚುನಾವಣಾ ನೀತಿ ಸಂಹಿತೆ ಜಾರಿಯಾದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ.ಆಹ್ವಾನಿತ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಲು ಮಾತ್ರ ಅವಕಾಶ ಇರುತ್ತೆ.ಸಾಮಾನ್ಯ ಜನರಂತೆ ದರ್ಶನ ಮಾಡಲು ಅವಕಾಶ.ಅದರಂತೆ ಈ ಬಾರಿ ಕರಗ ಆಚರಣೆ ನಡೆಯಲಿದೆ ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ