ಪಠ್ಯ ಪರಿಷ್ಕರಣೆ ಹಿಂಪಡೆಯೋ ಪ್ರಶ್ನೆಯೇ ಇಲ್ಲ, ಚಕ್ರತೀರ್ಥನ ಪರ ಶಿಕ್ಷಣ ಸಚಿವರ ಬ್ಯಾಟಿಂಗ್

ಮಂಗಳವಾರ, 31 ಮೇ 2022 (21:06 IST)
ಪ್ರಗತಿಪರರು, ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಹಿರಿಯ ಸಾಹಿತಿ ಎಸ್.ಜಿ ರಾಮಕೃಷ್ಣ ಮಾತನಾಡಿ ಪಠ್ಯ ಪುಸ್ತಕ ಪರಿಷ್ಕರಣೆ ನ್ಯಾಯಬದ್ದ ವಾಗಿ ಆಗಿಲ್ಲ, ಹೊಸ ಪಠ್ಯ ಪರಿಷ್ಕರಣೆ ಮಾಡುವಾಗ ಲೇಖಕರಿಗೆ ತಿಳಿಸುವ ಸೌಜನ್ಯ ಬೇಡ್ವೆ ಇವರಿಗೆ. ಲೇಖಕರ ಅನುಮತಿ ಕೇಳಬೇಕು ಅಲ್ವಾ, ಅಯೋಗ್ಯರ ಮದ್ಯೆ ನನ್ನ ಹೆಸರು ಬರೊದು ನನಗೆ ಇಷ್ಟ ಇಲ್ಲ. ಲೇಖಕರಿಗೆ ಮಾಹಿತಿ ನೀಡದೆ ನೀವು ಹೇಗೆ ಪರಿಷ್ಕರಣೆ ಮಾಡಿದ್ರಿ, ನಿಮ್ಮ ಪಾಠ ಕೈಬಿಡ್ತೀವಿ ಅಥವಾ ಸೇರುಸುತ್ತೇವೆ ಅಂತಾ ತಿಳಿಸಿಲ್ಲ. ಪಠ್ಯ ಪರಿಪರಿಷ್ಕರಣೆಯನ್ನ ಈ ಕೂಡಲೇ ರದ್ದು ಮಾಡಬೇಕು, ಭಗತ್ ಸಿಂಗ್ ಬಿಟ್ಟು ಬೇರೆ ಯಾರ ಪಾಠ ಹಾಕ್ತೀರಾ .ನನ್ನ ಲೇಖನ ಪಠ್ಯದಲ್ಲಿ ಸೇರುವುದಕ್ಕೆ ನನ್ನ ಸಂಪೂರ್ಣ ವಿರೋಧ ಇದೆ ಇದು ಶಿಕ್ಷಣ ಕ್ಷೇತ್ರದ ಅವನತಿಯ ಹಾದಿ. ನನ್ನ ಪತ್ರ ತಲುಪಿಲ್ಲ ಅಂತಾರೆ ಅಯೋಗ್ಯರು, ನಾನು ವಿಳೆದೇಲೆ ಕೊಟ್ಟು ಪತ್ರ ಕೊಡಬೇಕಿತ್ತಾ. ಯಜ್ಞದ ಬಗ್ಗೆ ಪಾಠ ಹಾಕಿದ್ದಾರೆ, ಯಜ್ಞದಿಂದ ಮಕ್ಕಳು ಏನು ಕಲಿಯಬೇಕು, ವೈಚಾರಿಕತೆಯನ್ನ ಗಾಳಿಗೆ ತೂರುತ್ತಿದ್ದಾರೆ ಎಂದು ಕಿಡಿಕಾರಿದ್ರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್  2017 ರಲ್ಲಿ ನಡೆದ ಇನ್ಸಿಡೆಂಟನ್ನ ಈಗ ಮಾತಾಡ್ತಿದ್ದಾರೆ. ವಾಟ್ಸ್ ಆಫ್ ನಲ್ಲಿ ಬಂದಿದ್ದನ್ನ ಫಾರ್ವರ್ಡ್ ಮಾಡಿದ್ದಾರೆ, ಇದಕ್ಕೆ ಸಮಜಾಯಿಸಿ ಕೊಟ್ಟಿದ್ದಾರೆ. ಅಂದು ಈ ಬಗ್ಗೆ ಉನ್ನತಮಟ್ಟದ ತನಿಖೆ ಆಗಿ, ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಸರ್ಕಾರವೇ ಬಿ ರಿಪೀರ್ಟ್ ಸಲ್ಲಿಸಿದೆ. ರೋಹಿತ್ ಚಕ್ರತೀರ್ಥ ನಿರ್ದೋಷಿ ಅನ್ನೋದನ್ನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಹೇಳಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಮುಗಿದೋಗಿದೆ, ಪ್ರಿಂಟ್ ಕೂಡ ಆಗೋಗಿದೆ, ಆ ಸಮಿತಿಯ ಕೆಲಸವೂ ಮುಗಿದೋಗಿದೆ ಹೀಗಾಗಿ ಈಗ ಆ ವಿಚಾರದ ಚರ್ಚೆ ಅನಗತ್ಯ.ಇವರಿಗೆ ಹಿಂದುತ್ವ, ರಾಷ್ತ್ರೀಯತೆ, ಬಿಜೆಪಿಯನ್ನ ತೆಗಳುವುದೇ ಕೆಲಸ ಅದನ್ನಮಾಡ್ತಿದ್ದಾರೆ ಅಷ್ಟೇ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ ಮಾಡಲಿ, ಅವರ ತಪ್ಪಿನ ಅರಿವಾದಾಗ ಸುಮ್ಮನಾಗ್ತಾರೆ ಇದರ ಹಿಂದೆ ಒಂದು ವ್ಯವಸ್ಥಿತ ರಾಜಕೀಯ ಷಡ್ಯಂತ್ರ ಇದೆ ಎಂದು ಟಾಂಗ್ ಕೊಟ್ಟಿದ್ದಾರೆ. 
ಸದ್ಯ ಪಠ್ಯ ಪುಸ್ತಕ ವಿವಾದ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣ್ತಿಲ್ಲ, ಹಲವು ಸಂಘಟನೆಗಳು ಚಕ್ರತೀರ್ಥ ವಿರುದ್ಧ ತೀರ್ವ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಅವರ ಬಂಧನಕ್ಕೆ ಆಗ್ರಹಿಸ್ತಿದ್ದಾರೆ ಆದ್ರೆ ಶಿಕ್ಷಣ ಸಚಿವರು ಅವರದ್ದು ಏನೂ ತಪ್ಪಿಲ್ಲ ಅಂತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ