ಬಂದ್ ಹಿಂಪಡೆಯುವ ಪ್ರಶ್ನೆಯೇ ಇಲ್ಲ
ನಮ್ಮದು ಪ್ರತಿಷ್ಟೆಯ ಬಂದ್ ಅಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಇವತ್ತು ಸಭೆಗೆ ಬಂದಿರುವ ಉದ್ದೇಶ ನಾಳೆಯ ಬಂದ್ಗೆ ಬೆಂಬಲ ಕೋರಲು ಬಂದಿದ್ದೇನೆ. ಬಂದ್ ಹಿಂಪಡೆಯುವ ಪ್ರಶ್ನೆಯೇ ಇಲ್ಲ.. ನಾಳೆ ಬೆಂಗಳೂರು ಬಂದ್ ಇದೆ. ನೋಡೋಣ ಸಭೆಯಲ್ಲಿ ಯಾವೆಲ್ಲಾ ತೀರ್ಮಾನವಾಗುತ್ತೆ ಅನ್ನೋದನ್ನ ಎಂದರು.