ನೀವು ಪ್ಯಾರಾಸಿಟಾಮೋಲ್ ಖರೀದಿ ಮಾಡಿದ್ರೆ ಈ ಕೆಲಸ ಮಾಡ್ಲೇಬೇಕು

ಭಾನುವಾರ, 12 ಏಪ್ರಿಲ್ 2020 (17:17 IST)
ಕೋವಿಡ್ - 19 ರೋಗ ಪತ್ತೆ ಹಚ್ಚುವಿಕೆ ಹಾಗೂ ರೋಗ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ಯಾರಾಸಿಟಾಮೋಲ್ ಆಧಾರಿತ ಔಷಧಗಳನ್ನು ವೈದ್ಯರ ಸಲಹೆ ಮೇರೆಗೆ ಹಾಗೂ ನೇರವಾಗಿ ಕೌಂಟರ್ ನಲ್ಲಿ  ಪಡೆಯೋವಾಗ ಈ ಕೆಲಸ ಮಾಡಲೇಬೇಕು.

ಧಾರವಾಡ ಜಿಲ್ಲೆಯಲ್ಲಿ ಕೋವಿಡ್ - 19 ರೋಗ ಪತ್ತೆ ಹಚ್ಚುವಿಕೆ ಹಾಗೂ ರೋಗ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ಯಾರಾಸಿಟಾಮೋಲ್ ಆಧಾರಿತ ಔಷಧಗಳನ್ನು ವೈದ್ಯರ ಸಲಹೆ ಮೇರೆಗೆ ಹಾಗೂ ನೇರವಾಗಿ ಕೌಂಟರ್ ನಲ್ಲಿ  (Paracetamol Based Drugs - Both Precriptive and OTC ( Over - the - counter ) ಮಾರಾಟಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಗೆ ಸಂಬಂಧಿಸಿದ ಹೆಸರು, ವಿಳಾಸ , ಮೊಬೈಲ್ ಸಂಖ್ಯೆ ಹಾಗೂ ವೈದ್ಯರ ಹೆಸರು , ಮೊಬೈಲ್ ಸಂಖ್ಯೆ ಮತ್ತು ವಿಳಾಸದ ವಿವರಗಳನ್ನು ಪ್ರತಿಯೊಂದು ಔಷಧಿ ಅಂಗಡಿಗಳು ಕಡ್ಡಾಯವಾಗಿ ಪಡೆದು, ಎಲ್ಲ ಮಾಹಿತಿಯನ್ನು ಜಿಲ್ಲೆಯ ಔಷಧ ನಿಯಂತ್ರಣಾಧಿಕಾರಿಗಳಿಗೆ ಪ್ರತಿ ದಿನ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು.

ಈ ಕಾರ್ಯವನ್ನು ಜಿಲ್ಲೆಯ ಔಷಧ ನಿಯಂತ್ರಣಾಧಿಕಾರಿಗಳು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಿ ಮಾಹಿತಿಯನ್ನು ಪ್ರತಿ ದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು  ಹಾಗೂ ಜಿಲ್ಲಾ ಸವೇಕ್ಷಣಾಧಿಕಾರಿಗಳಿಗೆ ಒದಗಿಸಬೇಕು.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಕೋವಿಡ್ -19 ರ ಅಡಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-2005 ( " The Karnataka Epidemic Diseases , COVID - 19 Regulations 2020 ' ಹಾಗೂ Disaser Management Act 2005) ರ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ