ತಮ್ಮ ಸ್ಥಾನವೇ ಅಲುಗಾಡುತ್ತಿರುವಾಗ ಸಿದ್ದರಾಮಯ್ಯ ಮೇಲೆ ಆರೋಪ ಮಾಡುತ್ತಿದ್ದಾರೆ
ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಇನ್ನೊಬ್ಬ ದಲಿತ ನಾಯಕನ್ನೇ ಎತ್ತಿಕಟ್ಟಿದೆ. ಹೀಗೆ ಒಂದು ಸಮಾಜವನ್ನು ತುಳಿಯಲಿ ಅದೇ ಸಮಾಜದ ನಾಯಕರನ್ನು ಎತ್ತಿಕಟ್ಟುವುದು ಬಿಜೆಪಿ, ಆರ್‌ಎಸ್‌ಎಸ್ ಅಜೆಂಡ. ಲಿಂಗಾಯತ ನಾಯಕರನ್ನೇ ಎತ್ತಿಕಟ್ಟಿ ಯಡಿಯೂರಪ್ಪ ಅವರನ್ನು ಬಲಿ ಕೊಟ್ಟಿದ್ದು ಇದೇ ತಂತ್ರದಿಂದ ಎಂದು ದೂರಿದರು.
ಛಲವಾದಿ ನಾರಾಯಣಸ್ವಾಮಿ ಅವರಿಗೆ ನಾನು ಅವಮಾನ ಮಾಡಿಲ್ಲ. ಅವರು ಮೈಸೂರು ಬಳಿ ಸಾಫ್ಟ್‌ವೇರ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು 8029 ಚದರ್ ಮೀಟರ್ ಭೂಮಿ ಪಡೆದಿದ್ದಾರೆ. ಅಲ್ಲಿ ಶೆಡ್ ಮಾತ್ರ ಕಟ್ಟಿರುವುದರಿಂದ ನಾನು ಶೆಡ್ ಗಿರಾಕಿ ಎಂದಿದ್ದೇನೆ ಅಷ್ಟೇ ಎಂದು ಹೇಳಿದರು.