ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಈ ಕೇಂದ್ರ ನಿರ್ವಹಿಸಲ್ಪಡುತ್ತಿದ್ದು, 2021ರ ಫೆಬ್ರವರಿ 6 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಉದ್ಘಾಟಿಸಲ್ಪಟ್ಟಿತ್ತು. ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆ ನಂತರದ ಕೆಲವು ಸಮಯ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬಳಿಕ ಹಿರಿಯರಿಗೆ ರೂ.30, ಮಕ್ಕಳಿಗೆ ರೂ.15 ಪ್ರವೇಶ ದರ ನಿಗದಿ ಪಡಿಸಲಾಗಿದ್ದು,ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶದ ಅವಕಾಶವಿದೆ.