ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷನಿಂದ ಸೈಟ್ ವಂಚನೆ ಪ್ರಕರಣ
ಸೋಮವಾರ, 15 ನವೆಂಬರ್ 2021 (20:55 IST)
ಬೆಂಗಳೂರು: ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷನಿಂದ ಸೈಟ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ನಟರಾಜ್ ವಿರುದ್ಧ 100ಕ್ಕೂ ಹೆಚ್ಚು ದೂರು ದಾಖಲು ಆಗಿರುವುದು ತಿಳಿದುಬಂದಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ನಟರಾಜ್ನಿಂದ ಮೋಸಹೋದವರಿಂದ ಸಾಲು ಸಾಲು ದೂರು ದಾಖಲಾಗಿದೆ. ಸರ್ವೆ ನಂಬರ್, ಶೆಡ್ಯೂಲ್ ಬದಲಾಯಿಸಿ ಹಲವರಿಗೆ ಮಾರಾಟ ಮಾಡಿರುವ ವಿಚಾರ ಬಯಲಾಗಿದೆ.
75 ಎಕರೆ ಭೂಮಿಯಲ್ಲಿ ಸೈಟ್ ಮಾಡಿ ಮಾರಿದ್ದ ನಟರಾಜ್, ಒಂದೇ ನಿವೇಶನ ಹಲವರಿಗೆ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ನಟರಾಜ್ನಿಂದ ಮೋಸಹೋದವರಿಂದ ಸಾಲು ಸಾಲು ದೂರು ದಾಖಲಾಗಿದ್ದು, ಇದೀಗ ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.