ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋ ಬಗ್ಗೆ ಮುಂದೆ ತಿರ್ಮಾನ-ಜನರ್ಧಾನ ರೆಡ್ಡಿ

ಸೋಮವಾರ, 27 ಮಾರ್ಚ್ 2023 (20:30 IST)
ಎಲ್ಲಾ ಪಕ್ಷದವರೂ, ನಾಯಕರು ನನ್ನನ್ನು ಪುಟ್ಬಾಲ್ ರೀತಿಯಲ್ಲಿ ಆಡಿದ್ರೂ.ಅದೇ ಕಾರಣಕ್ಕೆ ನಾನು ಪುಟ್ಬಾಲ್ ಚಿಹ್ನೆ ಆಯ್ಕೆ ಮಾಡಿಕೊಂಡೆ. ಮತ್ತೆ ಪುಟ್ಬಾಲ್ ಆಟದಲ್ಲಿ ಯಾರು ಎಷ್ಟು ಗೋಲ್ ಹೊಡೆದ್ರೂ, ಯಾರಿಗೆ ಗೋಲ್ಡನ್ ಬೂಟ್ ಸಿಕ್ತು ಅಂತ ನೀವೆ ಬರೆದುಕೊಳ್ಳಿ.ನಾನಂತೂ ಪುಟ್ಬಾಲ್ ಆದೆ. ಎಂದು  ಪಕ್ಷದ ಚಿಹ್ನೆ ಬಗ್ಗೆ ವಿಶಿಷ್ಟ ವ್ಯಾಖ್ಯಾನ ನೀಡಿದ ಜನಾರ್ದನ ರೆಡ್ಡಿ.

ಮಾಜಿ ಸಚಿವ ಗಾಲೀ‌ಜನಾರ್ಧನ ರೆಡ್ಡಿ  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಹಾಗೂ ಪ್ರಣಾಳಿಕೆ ಯನ್ನ‌ ತಮ್ಮ‌ನಿವಾಸ ಪಾರಿಜಾತ ನಿವಾಸದಲ್ಲಿ‌ ಬಿಡುಗಡೆ ಮಾಡಿದ್ರು.  ಡಿಸೆಂಬರ್ ೨೫ ರಂದು ನಾನು ನಮ್ಮ ಪಕ್ಷವನ್ನು  ಘೋಷಣೆ ಮಾಡಿದೆ , ಈಗಾಗಲೇ ನಾನು ಪಕ್ಷದ ಕನಸುಗಳನ್ನು ಜನರ ಮುಂದೆ ಹೇಳ್ತಾಯಿದ್ದೀನಿ ಈ ಪಕ್ಷದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರಿಗೆ ಒಳ್ಳೆಯದು ಆಗಬೇಕು , ಜನರು ಸಹ ನನಗೆ ಸ್ಪಂದಿಸಿದ್ದಾರೆ, ೧೨ ಅಭ್ಯರ್ಥಿಗಳ ಘೋಷಣೆ ಮಾಡದ್ದೀನಿ ೫೦ ಕ್ಷೇತ್ರಗಳಲ್ಲಿ ಪಕ್ಷದ ಚಟುವಟಿಕೆಗಳು ನಡಿತ್ತಿವೆ 
೩೦ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ನೂರಕ್ಕೆ ನೂರರಷ್ಟು  ಗೆಲ್ಲುವು ಸಾಧಿಸಲಿದೆ ಎಂದರು.ಈ ಹಿಂದೆ ರಾಜಕೀಯ ಮಾಡುವಾಗ ಏನ್ ಏನ್ ಸಮಸ್ಯೆ ಇತ್ತು ಅಂತ ಗೊತ್ತಿತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ, ಹಾಗೂ  ಯಾರ ಜೊತೆಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ*ಬಿಜೆಪಿ ಸೇರಿದಂತೆ ಯಾವ ಪಕ್ಷದ ನಾಯಕರು ನನ್ನ ಸಂಪರ್ಕ ಮಾಡಿಲ್ಲ, ಎಂದ್ರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡ್ತಿರುವ ಹಿನ್ನೆಲೆ , ಎಲ್ಲಿ ನಮಗೆ ಶಕ್ತಿ ಇರುತ್ತದೆಯೋ ಅಲ್ಲಿ ಸ್ಪರ್ಧೆ ಮಾಡ್ತೇವೆ.. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸಂಘಟನೆ ನಡೆದಿದೆ.. ಅಲ್ಲಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ...ಗೆಲ್ಲುವ ಶಕ್ತಿ ಇದ್ದ ಕಡೆ ಮಾತ್ರ ಸ್ಪರ್ಧೆ ಮಾಡ್ತೇವೆ.ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋ ಬಗ್ಗೆ ಮುಂದೆ ತಿರ್ಮಾನ ಮಾಡ್ತೇವೆ ಎಂದ್ರು.
 
 ಪಕ್ಷದ ಚಿಹ್ನೆ ಫುಟ್ಬಾಲ್  ಹಾಗೂ ಕೆಸರಿ, ಬಿಳಿ,‌ಹಸಿರು ಸರ್ಕಲ್‌ನ ಮಧ್ಯಭಾಗದಲ್ಲಿ ನೀಲಿ ಬಣ್ಣದ ಹಸ್ತಲಾಘವ ನ್ನೊಳಗೊಂಡ ಚಿಹ್ನೆ ‌ಯಾಗಿತ್ತು. ಇದು ಹಿಂದು,‌ಮುಸ್ಲಿಂ, ಕ್ರಿಶ್ಚಿಯನ್ ‌ಹಾಗೂ‌ ದಲಿತ ಬಾಂದವರ ಬಾವೈಕ್ಯದ ಸಂಕೇತವಾಗಿದೆ ಎಂದು ಹೇಳಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ