ಬೆಂಗಳೂರಿನಿಂದ ಬರುವವರಿಗೆ ಇದು ಕಡ್ಡಾಯ
ವಿದ್ಯಾರ್ಜನೆಗೆ, ಕೆಲಸಕ್ಕಾಗಿ ಗುಳೆ ಇಲ್ಲವೇ ಪ್ರವಾಸಕ್ಕೆ ಹೋದವರಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ.
ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ವ್ಯಕ್ತಿಗಳನ್ನು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಮಾಡಲಾಗುವುದು.
ಜಿಲ್ಲೆಗೆ ವಲಸೆ ಬಂದ ವ್ಯಕ್ತಿಗಳನ್ನು 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಡಿಸಲಾಗುತ್ತದೆ. ಒಂದು ವೇಳೆ ರೋಗ ಲಕ್ಷಣಗಳಾದ ಕೆಮ್ಮು, ನೆಗಡಿ, ಶೀತ, ಜ್ವರ ಮತ್ತು ತೀವ್ರ ಉಸಿರಾಟದ ತೊಂದರೆ ಇದ್ದಲ್ಲಿ ಸರಕಾರಿ ಕ್ವಾರಂಟೈನ್‌ನಲ್ಲಿರಿಸಿ ನಿಗಾವಹಿಸಲಾಗುತ್ತದೆ.