ಇದು ಧೋಕಾ ಬಜೆಟ್ ಖರ್ಗೆ ವ್ಯಂಗ್ಯ

ಶನಿವಾರ, 5 ಮಾರ್ಚ್ 2022 (07:29 IST)
ಕಲಬುರಗಿ : ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಡಬಲ್ ಇಂಜಿನ್ ಬಜೆಟ್ ಅಲ್ಲ,

ಇದು ಡಬಲ್ ಧೋಕಾ ಬಜೆಟ್ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯಸರ್ಕಾರದ ಬಜೆಟ್ ಬಗ್ಗೆ ಟ್ವೀಟ್ ಮಾಡಿದ ಖರ್ಗೆ ಬಿಜೆಪಿಯವರು ನವ ಕರ್ನಾಟಕ ನಿರ್ಮಿಸುತ್ತೇವೆ ಎಂದಿದ್ದರು. ಇವರ ಯೋಗ್ಯತೆಗೆ ಕರ್ನಾಟಕದಲ್ಲಿ ಈಗಾಗಲೇ ಇರುವುದನ್ನು ಉಳಿಸಿಕೊಂಡು ಹೋದರೆ ಸಾಕಾಗಿದೆ.

ಕರ್ನಾಟಕವನ್ನು ಸಾಲದಲ್ಲಿ ಮುಳುಗಿಸಿದ್ದಾರೆ ಎಂದು ಟೀಕಿಸಿದ್ದಾರೆ.  ಇದೊಂದು ಎಕನಮಿ ರಿಕವರಿ ಬಜೆಟ್ ಅಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ