ಮಹಿಳೆಯರು ಪರಪುರುಷನ ಜೊತೆ ಅನೈತಿಕ ಸಂಬಂಧ ಹೊಂದಲು ಇದೇ ಕಾರಣ

ಮಂಗಳವಾರ, 28 ಮೇ 2019 (09:05 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳು ಹೆಚ್ಚಾಗುತ್ತಿದೆ. ಕೆಲವೊಮ್ಮೆ ಇದರಿಂದ ಯುವಕ ಯುವತಿಯರ ಜೀವನದ ಜೊತೆಗೆ ಜೀವವು ಬಲಿಯಾದ ಹಲವು ಘಟನೆ ನಡೆದಿದೆ. ಇದಕ್ಕೆ ವೈಯುಕ್ತಿಕ ಸೇರಿದಂತೆ ಹಲವಾರು ಕಾರಣಗಳಿವೆ. ಕೆಲವೊಂದು ಮನೋವೈಜ್ಞಾನಿಕ ಕಾರಣಗಳು ಕೂಡ ಇವೆ.




ತೀರ ಚಿಕ್ಕ ವಯಸ್ಸಿಗೆ ಮದುವೆಯಾದವರು 40 ವರ್ಷಕ್ಕೆ ಕುಟುಂಬದ ಜಂಜಾಟಗಳಿಂದ ಬೇಸತ್ತು ಹೋಗಿರುತ್ತಾರೆ. ಯೌವ್ವನ ಹಾಳಾಯಿತಲ್ಲ ಎಂದು ಭಾವಿಸುತ್ತಾರೆ. ತಮ್ಮ ಪತ್ನಿಗಿಂತ ಬೇರೆಯವರೆ ಆಕರ್ಷಿತರನ್ನಾಗಿ ಬಯಸಿಕೊಳ್ಳುತ್ತಾರೆ. ಇದು ತಾನಾಗಿಯೇ ಅನೈತಿಕಕ್ಕೆ ತಿರುಗುತ್ತದೆ.


ಬಲವಂತದ ಮದುವೆ ಅನೈತಕಕ್ಕೆ ಪ್ರಮುಖ ಕಾರಣ. ವಿವಾಹವಾದ ಬಳಿಕ ತಮ್ಮ ಮನಸ್ಸಿಗೆ ಇಷ್ಟವಾಗುವವರನ್ನು ಅಪೇಕ್ಷಿಸಲು ಬಯಸುತ್ತಾರೆ. ಗೆಳೆತನ ಮಾಡಿಕೊಂಡು ದೈಹಿಕ ಸಂಬಂಧದ ಕಡೆ ಮುಖ ಮಾಡುತ್ತಾರೆ. ತಮ್ಮ ಪತ್ನಿಯಿಂದ ಅಥವಾ ಗಂಡನಿಂದ ಲೈಂಗಿಕ ತೃಪ್ತಿ ಸಿಗದಿದ್ದಾಗ ವಿವಾಹೇತರ ಸಂಬಂಧಕ್ಕೆ ಮುಂದಾಗುವುದು ಸಹಜ.


ಆರ್ಥಿಕ ತೊಂದರೆಯಿಂದ ದಂಪತಿ ಮಧ್ಯೆ ಜಗಳವಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬೇರೆಯವರನ್ನು ಆಕರ್ಷಿಸಲು ಮುಂದಾಗುತ್ತಾರೆ. ಪತಿ ಅಥವಾ ಪತ್ನಿ ಯಾವುದಾದರೂ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದರೆ ಪಾಠ ಕಲಿಸಲು ಬೇರೆಯವರ ಬಳಿ ಸಂಬಂಧ ಬೆಳೆಸಲು ಮನಸ್ಸು ಮಾಡುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ