ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಆತ ಮಾಡ್ದ ಇಂತಹ ನೀಚ ಕೆಲಸ
ಭಾನುವಾರ, 26 ಮೇ 2019 (07:03 IST)
ಉತ್ತರ ಪ್ರದೇಶ : ಅಪ್ರಾಪ್ತ ಯುವತಿಗೆ ಮದುವೆ ಆಸೆ ತೋರಿಸಿ ಯುವಕನೊಬ್ಬ ತನ್ನ ಸಂಬಂಧಿಕನ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಜಿತೇಂದ್ರ ಎಂಬಾತ 9 ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಓಡಿಸಿಕೊಂಡು ಹೋಗಿ ನಂತರ ಆಕೆಗೆ ನಶೆಯ ಪದಾರ್ಥ ನೀಡಿದ್ದಾನೆ. ಆಕೆಗೆ ಪ್ರಜ್ಞೆ ತಪ್ಪಿದ ಮೇಲೆ ಆರೋಪಿ ಚಿಕ್ಕಮ್ಮನ ಮಗನಿಗೆ ಫೋನ್ ಮಾಡಿ ಕರೆಸಿಕೊಂಡು ಇಬ್ಬರು ಸೇರಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ.
ನಂತರ ಹುಡುಗಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಹುಡುಗಿ ತನ್ನ ತಾಯಿಗೆ ವಿಷಯ ತಿಳಿಸಿದ್ದು, ಆರೋಪಿಗಳ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರುನ್ವಯ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.