ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ : ನರೇಂದ್ರ ಮೋದಿ

ಶನಿವಾರ, 29 ಏಪ್ರಿಲ್ 2023 (14:12 IST)
ಬೀದರ್ : ದೇಶದಲ್ಲೇ ಕರ್ನಾಟಕ ನಂಬರ್ 1 ಆಗಲು ಡಬಲ್ ಎಂಜಿನ್ ಸರ್ಕಾರ ಬರಬೇಕು ಎಂದು ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
 
“ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಘೋಷಿಸುವ ಮೂಲಕ ಮೋದಿ ಗಮನ ಸೆಳೆದರು. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೀದರ್ನಲ್ಲಿ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡು ನರೇಂದ್ರ ಮೋದಿ ಮಾತನಾಡಿದರು.

“ಜಗದ್ಗುರು ಬಸವೇಶ್ವರ ಮತ್ತು ಶಿವಶರಣರ ಭೂಮಿಗೆ ನನ್ನ ನಮಸ್ಕಾರಗಳು” ಎಂದು ಕನ್ನಡದಲ್ಲೇ ಮೋದಿ ಭಾಷಣ ಆರಂಭಿಸಿದರು. ಬಸವೇಶ್ವರ ಅವರ ಆಶೀರ್ವಾದ ನಿಮ್ಮ ಕೆಲಸ ಮಾಡಲು ಶಕ್ತಿ ಕೊಡುತ್ತದೆ. ಕರ್ನಾಟಕದ ಕೀರಿಟ ಬೀದರ್ನಲ್ಲಿ ಮೊದಲ ಬಾರಿ ಪ್ರಧಾನಿಯಾದ ವೇಳೆ ಆಶೀರ್ವಾದ ಸಿಕ್ಕಿತ್ತು. ಅಂದಿನಿಂದ ಸಂಬಂಧ ಮುಂದುವರಿದಿದೆ.

ದೊಡ್ಡ ಸಂಖ್ಯೆಯಲ್ಲಿ ಬಂದು ದೇಶಕ್ಕೆ ನೀವು ಸಂದೇಶ ನೀಡುತ್ತಿದ್ದೀರಾ. ಕರ್ನಾಟಕದಲ್ಲಿ ಬಹುಮತ ಬಿಜೆಪಿ ಸರ್ಕಾರದ ಬರಲಿದೆ ಎಂದು ಸಂದೇಶ ನೀಡಿದ್ದೀರಾ. ಇದು ಸರ್ಕಾರ ಮಾಡುವ ಚುನಾವಣೆ ಮಾತ್ರವಲ್ಲ. ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವ ಚುನಾವಣೆ. ಭಾರತದ ಅಭಿವೃದ್ಧಿಯ ಚುನಾವಣೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ