ಜಾತಿ ಸಮೀಕ್ಷೆಗಾಗಿ 130 ಕೋಟಿ ರೂ. ಖರ್ಚು ಮಾಡಿದ್ದೀರಿ. ನಿಮಗೆ ತಾಕತ್ ಇಲ್ಲ. ಹೀಗಾಗಿ ಅದನ್ನು ಜಾರಿ ಮಾಡಲಿಲ್ಲ. ಆದರೆ ನಾವು ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇವೆ.
ಸಮಾಜ ಒಡೆಯುವ ಇಚ್ಛೆ ನಮಗಿಲ್ಲ, ಅದು ಕಾಂಗ್ರೆಸ್ನವರ ಕೆಲಸ. ಶೇ.75 ರಷ್ಟು ಮೀಸಲಾತಿ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಎಸ್ಸಿ, ಎಸ್ಟಿ ಮೀಸಲಾತಿ ಜಾರಿ ಮಾಡಲಿಲ್ಲ. 30 ವರ್ಷದ ಬೇಡಿಕೆಯನ್ನು ಈಡೇರಿಸಲಿಲ್ಲ.
ಎಸ್ಸಿ, ಎಸ್ಟಿಯನ್ನು ಅವರ ಸರ್ಕಾರ ಇದ್ದಾಗ 5 ವರ್ಷ ಬಾವಿಯಲ್ಲಿ ಹಾಕಿದರು. ಆದರೆ ನಾವು ಎಸ್ಸಿ, ಎಸ್ಟಿ ಬೇಡಿಕೆ ಈಡೇರಿಸಿದ್ದೇವೆ. ಜೇನುಗೂಡಿಗೆ ಕೈ ಹಾಕಬೇಡಿ ಎಂದಿದ್ದರು. ನಾನು ಜೇನು ಹುಳ ಕಚ್ಚಿಸಿಕೊಂಡು ಜನರಿಗೆ ಒಳ್ಳೆದು ಮಾಡಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ಛಿದ್ರವಾಗಿದೆ. ಎಲ್ಲಾ ಸಮುದಾಯದವರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ನವರು ಹತಾಶೆಯಾಗಿದ್ದಾರೆ. ಲಿಂಗಾಯತರು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಇದನ್ನೂ ಒಪ್ಪಿಕೊಳ್ಳುತ್ತೀರಾ ಎಂದು ಜನರನ್ನು ಪ್ರಶ್ನಿಸಿದ ಸಿಎಂ, ಕಾಂಗ್ರೆಸ್ನವರು ನೀಡುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ. ಅದು ಗಳಗಂಟಿ. ಮೇ 10ರ ನಂತರ ಅದು ಇರುವುದಿಲ್ಲ ಎಂದು ಲೇವಡಿ ಮಾಡಿದರು.