ಭಾರತೀಯ ಸೇನೆಯನ್ನು ಪ್ರಶ್ನಿಸುವವರ ಈ Videoವನ್ನು ನೋಡಲೇ ಬೇಕು, ಮೆಚ್ಚಲೇ ಬೇಕು

Sampriya

ಶುಕ್ರವಾರ, 25 ಏಪ್ರಿಲ್ 2025 (15:09 IST)
Photo Credit X
ಬೆಂಗಳೂರು: ಕಾಶ್ಮೀರದ ಪಹಲ್ಗಾಮ್​​ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಗೆ ಹಲವಾರು ಮಂದಿ ಭದ್ರತಾ ವೈಫಲ್ಯ ಎಂದು ದೂರಿದ್ದಾರೆ. ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ. 2019ರಲ್ಲಿ ನಡೆದ ದಾಳಿ ಬಳಿಕ ಇದು ಅತಿದೊಡ್ಡ ದಾಳಿಯಾಗಿದೆ.

ಭಯೋತ್ಪಾದಕರ ವಿರುದ್ಧ ಪ್ರತೀಕಾರಕ್ಕೆ ಇಡೀ ದೇಶ ಕಾಯ್ತಿದೆ. ಕೇಂದ್ರ ಸರ್ಕಾರ ಕೂಡ ಒಬ್ಬರನ್ನು ಬಿಡಲ್ಲ, ಉಗ್ರರ ಸಂಹಾರ ಮಾಡೋದಾಗಿ ಪ್ರತಿಜ್ಞೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈ ದಾಳಿಗೆ ದೇಶದ ಭದ್ರತಾ ವೈಫಲ್ಯ ಎಂದು ದೂರಿದ್ದಾರೆ.

ಈ ರೀತಿ ದೂರುವವರಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಉತ್ತರ ನೀಡಲಾಗಿದೆ.  ಈ ವಿಡಿಯೋದಲ್ಲಿ ಭಾರತದ ಸೇನೆ ಬಗ್ಗೆ ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ. ‌‌

ದಡ್ಡ ಅರಣ್ಯದಲ್ಲಿ ಸೈನಿಕರ ತಂಡ ಬಾಂಬ್‌ ಇರುವಿಕೆಯನ್ನು ಪತ್ತೆ ಮಾಡುವ ಯಂತ್ರದಲ್ಲಿ ಹುಡುಕಾಡುತ್ತಿರುವುದನ್ನು ಕಾಣಬಹುದು. ಮತ್ತೊಂದು ಫೋಟೋದಲ್ಲಿ ನೆಲವನ್ನು ಅಗಿದು, ಅದರಡಿಯಲ್ಲಿ ಹೊತ್ತಿಟ್ಟ ಬಾಂಬ್‌ಗಳನ್ನು ಪತ್ತೆ  ಮಾಡಿರುವುದನ್ನು ಕಾಣಬಹುದು.

Those who question the Indian Army ????
should also see how our Indian Army performs its duty with full devotion without caring about its life even when we are sleeping peacefully????.

At least a like is a must for our country's army❤️#PakistanBehindPahalgam #PahalgamTerrorAttack pic.twitter.com/Tf3NgHp16p

— Vivek Vikash (@imvivekvikash) April 25, 2025

'ನಾವು ಶಾಂತಿಯುತವಾಗಿ ಮಲಗಿರುವಾಗಲೂ ನಮ್ಮ ಭಾರತೀಯ ಸೇನೆಯು ತನ್ನ ಪ್ರಾಣದ ಬಗ್ಗೆ ಕಾಳಜಿ ವಹಿಸದೆ ಸಂಪೂರ್ಣ ಭಕ್ತಿಯಿಂದ ತನ್ನ ಕರ್ತವ್ಯವನ್ನು ಹೇಗೆ ನಿರ್ವಹಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ನಮ್ಮ ದೇಶದ ಸೈನ್ಯಕ್ಕೆ ಕನಿಷ್ಠ ಒಂದು ಲೈಕ್ ಬೇಕು' ಎಂದು ಬರೆದು ಈ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ